ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ಆಡುವ ಬಗ್ಗೆ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್.
ಭರ್ಜರಿ ಫಾರ್ಮ್ ನಲ್ಲಿರುವ ರಿಷಭ್ ಪಂತ್ ಮೂರನೇ ಟೆಸ್ಟ್ ವೇಳೆ ಕೀಪಿಂಗ್ ಮಾಡುವಾಗ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಅವರು ಕೇವಲ ಬ್ಯಾಟಿಂಗ್ ಮಾತ್ರ ಮಾಡಿದ್ದರು. ಧ್ರುವ ಜ್ಯುರೆಲ್ ಬದಲಿ ಆಟಗಾರನಾಗಿ ಕೀಪಿಂಗ್ ಮಾಡಿದ್ದರು.
ಹೀಗಾಗಿ ಅವರು ನಾಲ್ಕನೇ ಪಂದ್ಯ ಆಡಲು ಫಿಟ್ ಆಗುತ್ತಾರಾ ಎಂಬ ಅನುಮಾನವಿತ್ತು. ಇದೀಗ ಭಾರತ ತಂಡದ ಅಭ್ಯಾಸದ ವೇಳೆ ರಿಷಭ್ ಕೀಪಿಂಗ್ ಅಭ್ಯಾಸ ನಡೆಸುವುದು ಕಂಡುಬಂದಿದೆ. ಹೀಗಾಗಿ ಅವರು ನಾಲ್ಕನೇ ಪಂದ್ಯದಲ್ಲಿ ಕೀಪರ್ ಆಗಿಯೂ ಕರ್ತವ್ಯ ನಿರ್ವಹಿಸಬಹುದು ಎನ್ನಲಾಗಿದೆ.
ಒಂದು ವೇಳೆ ರಿಷಭ್ ಕೀಪಿಂಗ್ ಮಾಡುವಷ್ಟು ಫಿಟ್ ಅಲ್ಲದೇ ಇದ್ದರೆ ಅವರನ್ನು ಕೇವಲ ಬ್ಯಾಟಿಗನಾಗಿ ತಂಡದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಚಿಂತನೆ ನಡೆಸಿತ್ತು.