Select Your Language

Notifications

webdunia
webdunia
webdunia
webdunia

ತೂಕ ಇಳಿಸಿಕೊಂಡ ಕ್ರಿಕೆಟಿಗ ಸರ್ಫರಾಜ್ ಖಾನ್: ಇವರೇನಾ ಅವರು

Sarfaraz Khan

Krishnaveni K

ಮುಂಬೈ , ಸೋಮವಾರ, 21 ಜುಲೈ 2025 (17:18 IST)
Photo Credit: X
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್ ತಮ್ಮ ದೇಹ ಗಾತ್ರದಿಂದ ಟೀಕೆಗೊಳಗಾಗುತ್ತಿದ್ದರು. ಆದರೆ ಅವರೀಗ ತೂಕ ಇಳಿಸಿಕೊಂಡಿದ್ದು ಇವರೇನಾ ಅವರು ಎನ್ನುವಷ್ಟು ಬದಲಾಗಿದ್ದಾರೆ.

ದೇಹ ತೂಕದಿಂದಾಗಿಯೇ ಅವರಿಗೆ ತಂಡದಲ್ಲಿ ಅವಕಾಶ ಸಿಗುವುದು ಕಷ್ಟವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಿದ್ದೇ ಕೊನೆ. ಅದಾದ ಬಳಿಕ ಸರ್ಫರಾಜ್ ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ ಹಾಗಂತ ಅವರು ಸುಮ್ಮನೇ ಕೂತಿಲ್ಲ.

ತಮ್ಮ ದೇಹ ತೂಕವನ್ನು ಇಳಿಸಿಕೊಳ್ಳಲು ಶ್ರಮಪಟ್ಟಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಅವರು 17 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.  ಮೊದಲು ಗುಂಡ ಗುಂಡಗಿದ್ದ ಸರ್ಫರಾಜ ಈಗ ಕಂಪ್ಲೀಟ್ ಫಿಟ್ ಆಗಿ ಕಾಣುತ್ತಿದ್ದಾರೆ. ಅವರ ದಡೂತಿ ಹೊಟ್ಟೆ ಎಲ್ಲವೂ ಕರಗಿದೆ.

ಹಲವುರ ಸರ್ಫರಾಜ್ ಖಾನ್ ಫಿಟ್ನೆಸ್ ಬಗ್ಗೆ ಅವಹೇಳನ ಮಾಡಿದ್ದರು. ಅವರ ದೇಹ ಗಾತ್ರವನ್ನಿಟ್ಟುಕೊಂಡು ಬಾಡಿಶೇಮ್ ಮಾಡಿದ್ದರು. ಅವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸರ್ಫರಾಜ್ ದೇಹ ತೂಕ ಇಳಿಸಿಕೊಂಡಿದ್ದಾರೆ. ಅವರ ಲೇಟೆಸ್ಟ್ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video