ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಒಂದು ಬದಲಾವಣೆ ಖಚಿತ ಎನ್ನಲಾಗುತ್ತಿದೆ. ನಾಲ್ಕನೇ ಪಂದ್ಯಕ್ಕೆ ತಂಡ ಹೇಗಿರಲಿದೆ ಇಲ್ಲಿದೆ ವಿವರ.
									
			
			 
 			
 
 			
					
			        							
								
																	ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಟೆಸ್ಟ್ ಪಂದ್ಯ ಮುಕ್ತಾಯವಾಗಿದೆ. ಸರಣಿಯಲ್ಲಿ ಭಾರತ 1-2 ರಿಂದ ಹಿನ್ನಡೆಯಲ್ಲಿದೆ. ಕಳೆದ ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದೂ ಬ್ಯಾಟಿಗರ ವೈಫಲ್ಯದಿಂದ ಸೋಲುವಂತಾಯಿತು. ಹೀಗಾಗಿ ನಾಲ್ಕನೇ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಖಚಿತವಾಗಿದೆ.
									
										
								
																	ಎಂಟು ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದರೂ ಕರುಣ್ ನಾಯರ್ ರಿಂದ ಹೇಳಿಕೊಳ್ಳುವ ರನ್ ಬಂದಿಲ್ಲ. ಸಿಕ್ಕ ಅವಕಾಶವನ್ನು ಅವರು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಮುಂದಿನ ಪಂದ್ಯಕ್ಕೆ ಆಡುವ ಬಳಗದಿಂದ ಹೊರಗಿಡುವುದು ಬಹುತೇಕ ಖಚಿತವಾಗಿದೆ. ಅವರ ಸ್ಥಾನಕ್ಕೆ ಮತ್ತೆ ಸಾಯಿ ಸುದರ್ಶನ್ ಗೆ ಇನ್ನೊಂದು ಅವಕಾಶ ನೀಡುವ ಸಾಧ್ಯತೆಯಿದೆ.
									
											
							                     
							
							
			        							
								
																	ಇನ್ನು, ಜಸ್ಪ್ರೀತ್ ಬುಮ್ರಾ ಆಡುವುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಅವರು ವಿಶ್ರಾಂತಿ ಬಯಸಿದರೆ ಅರ್ಷ್ ದೀಪ್ ಸಿಂಗ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇರದು.