ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಟೀಂ ಇಂಡಿಯಾ ಯುವ ಬ್ಯಾಟಿಗ ಸಾಯಿ ಸುದರ್ಶನ್ ಪೆವಿಲಿಯನ್ ನಲ್ಲಿ ಮಾಡುತ್ತಿದ್ದ ಕೆಲಸ ನೋಡಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಸಾಯಿ ಸುದರ್ಶನ್ ಬಳಿಕ ಎರಡು ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗುಳಿದರು. ಆದರೆ ನಾಲ್ಕನೇ ಪಂದ್ಯದಲ್ಲಿ ಮತ್ತೆ ಆಡುವ ಅವಕಾಶ ಪಡೆದಿದ್ದಾರೆ. ಆದರೆ ಲಂಚ್ ಬ್ರೇಕ್ ನಲ್ಲಿ ಅವರು ಮಾಡುತ್ತಿದ್ದ ಕೆಲಸಕ್ಕೆ ಕೆಲವರು ಮೆಚ್ಚುಗೆ ಪಡೆದರೆ ಮತ್ತೆ ಕೆಲವರು ಡವ್ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಾಲ್ಕನೇ ದಿನದಾಟದ ಬ್ರೇಕ್ ನಡುವೆ ಪ್ಯಾಡ್, ಗ್ಲೌಸ್ ಕಟ್ಟಿಕೊಂಡು ಪೆವಿಲಿಯನ್ ನಲ್ಲಿ ಕೂತಿದ್ದ ಸಾಯಿ ಸುದರ್ಶನ್ ಕೈಯಲ್ಲೊಂದು ಕಾದಂಬರಿ ಹಿಡಿದು ಕೂತಿದ್ದರು. ಇದನ್ನು ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಕ್ಯಾಮರಾ ಎದುರು ಡವ್ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ವೇಳೆಯೂ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಸಾಯಿ ಸುದರ್ಶನ್ ಏನೋ ಬರೆದುಕೊಳ್ಳುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಈಗ ಕಾದಂಬರಿ ಓದುತ್ತಿದ್ದುದು ಕಂಡುಬಂದಿದೆ. ಅವರು ಓದುತ್ತಿದ್ದುದು ನೋಡಿ ವಾಷಿಂಗ್ಟನ್ ಸುಂದರ್ ಕೂಡಾ ಪಕ್ಕ ಬಂದು ಅವರ ಕೈಯಿಂದ ಪುಸ್ತಕ ಪಡೆದು ಅದು ಏನೆಂದು ಪರಿಶೀಲಿಸಿದ್ದಾರೆ.