Select Your Language

Notifications

webdunia
webdunia
webdunia
webdunia

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

Women's Chess World Cup, Koneru Hampi, Divya Deshmukh

Sampriya

ನವದೆಹಲಿ , ಶುಕ್ರವಾರ, 25 ಜುಲೈ 2025 (14:25 IST)
Photo Credit X
ನವದೆಹಲಿ:  ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ಗೆ ಭಾರತದ ಅನುಭವಿ ಆಟಗಾರ್ತಿ ಕೋನೇರು ಹಂಪಿ ಮತ್ತು ಯುವ ಆಟಗಾರ್ತಿ ದಿವ್ಯಾ ದೇಶಮುಖ್‌ ಲಗ್ಗೆ ಹಾಕಿದ್ದಾರೆ. ಇವರಲ್ಲಿ ಯಾರೇ ಗೆದ್ದರೂ ಭಾರತಕ್ಕೆ ವಿಶ್ವಕಪ್‌ ಕಿರೀಟ ಗ್ಯಾರಂಟಿಯಾಗಲಿದೆ. 

ಶನಿವಾರ ಫೈನಲ್ ಕದನ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಚೆಸ್‌ಗೆ ಒಂದು ಮೈಲಿಗಲ್ಲು ಸೃಷ್ಟಿಸುವ ಕ್ಷಣವಾಗಲಿದೆ. ಈ ಟೂರ್ನಿಯಲ್ಲಿ ಭಾರತದ ಸ್ಪರ್ಧಿಗಳು ಸೆಮಿಫೈನಲ್‌ ಪ್ರವೇಶಿಸಿದ್ದು ಇದೇ ಮೊದಲಾಗಿತ್ತು. ಅದರ ಬೆನ್ನಲ್ಲೇ ಭಾರತದ ಇಬ್ಬರೂ ಫೈನಲ್‌ ತಲುಪಿದ್ದಾರೆ. 

ಜಾರ್ಜಿಯಾದ ಬಟುಮಿಯಲ್ಲಿ ಗುರುವಾರ ನಡೆದ 2025ರ ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನ ಸೆಮಿಫೈನಲ್ ನಲ್ಲಿ 38 ವರ್ಷದ ಕೋನೇರು ಹಂಪಿ ಅದ್ಬುತ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದರು. ಇದಕ್ಕೂ 19 ವರ್ಷದ ದಿವ್ಯಾ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು.

ಹಂಪಿ ಅವರು ಟೈಬ್ರೇಕ್‌ನಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಕೊನೇರು ಹಂಪಿ ಸೋಲಿಸಿದ್ದರೆ, ದಿವ್ಯಾ ದೇಶ್ ಮುಖ್ ಅವರು ಚೀನಾದ ಮತ್ತೋರ್ವ ಪ್ರಬಲ ಎದುರಾಳಿ ತಾನ್ ಝೊಂಗಿ ಅವರನ್ನು ದಂಗುಬಡಿಸಿ ಚೊಚ್ಚಲ ಬಾರಿಗೆ ವಿಶ್ವ ಕಪ್ ಫೈನಲ್ ಪ್ರವೇಶಿಸಿದರು.

ವಿಶ್ವದ ಮಾಜಿ ನಂಬರ್ 2 ಹಂಪಿ ಮತ್ತೊಂದು ಪ್ರತಿಷ್ಟಿತ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದರೆ, ಉದಯೋನ್ಮುಖ ಆಟಗಾರ್ತಿ ದಿವ್ಯಾ ದೇಶಮುಖ್ ವೃತ್ತಿಜೀವನದ ನಿರ್ಣಾಯಕ ಗೆಲುವಿನೊಂದಿಗೆ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು