ನ್ಯೂಯಾರ್ಕ್: ಇಲ್ಲಿ ನಡೆದ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಚೆಸ್ ತಾರೆ ಕೊನೇರು ಹಂಪಿ ಮಹಿಳಾ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ಕೂಟದ ಫೈನಲ್‌ನಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿ ಕೊನೇರು ಹಂಪಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಆ ಮೂಲಕ ಕೊನೇರು ಹಂಪಿ, ಎರಡನೇ ಸಲ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಸಾಧನೆ ಮಾಡಿದ್ದಾರೆ.
2019ರಲ್ಲಿ ಜಾರ್ಜಿಯಾದಲ್ಲೂ ನಡೆದ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದಿದ್ದರು. ಅಲ್ಲದೆ ಚೀನಾದ ಜು ವೆಂಜುನ್ ಬಳಿಕ ಒಂದಕ್ಕಿಂತ ಹೆಚ್ಚು ಸಲ ಪ್ರಶಸ್ತಿ ಗೆದ್ದ ಆಟಗಾರ್ತಿ ಎನಿಸಿದ್ದಾರೆ. 37 ವರ್ಷದ ಭಾರತದ ನಂ.1 ಆಟಗಾರ್ತಿ ಕೂನೇರು ಹಂಪಿ, ಒಟ್ಟು 8.5 ಅಂಕಗಳನ್ನು ಕಲೆ ಹಾಕಿದರು.
ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಪುರುಷರ ವಿಭಾಗದಲ್ಲಿ 18 ವರ್ಷದ ರಷ್ಯಾದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಜಯಿಸಿದ್ದಾರೆ. ಆ ಮೂಲಕ ಈ ಪ್ರಶಸ್ತಿ ಗೆದ್ದ ಎರಡನೇ ಕಿರಿಯ ಆಟಗಾರ ಎನಿಸಿದ್ದಾರೆ.