Select Your Language

Notifications

webdunia
webdunia
webdunia
webdunia

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

Yash Dayal

Krishnaveni K

ಬೆಂಗಳೂರು , ಶುಕ್ರವಾರ, 25 ಜುಲೈ 2025 (09:15 IST)
ಬೆಂಗಳೂರು: ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ರೇಪ್ ಕೇಸ್ ನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇದೀಗ ಎರಡನೇ ಬಾರಿಗೆ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ಕೆಲವು ದಿನಗಳ ಹಿಂದೆ ಯಶ್ ದಯಾಳ್ ವಿರುದ್ಧ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಉತ್ತರ ಪ್ರದೇಶ ಮೂಲದ ಯುವತಿ ದಯಾಳ್ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ.

ಆಗಲೇ ದಯಾಳ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. 2025 ರ ಐಪಿಎಲ್ ಟೂರ್ನಿ ವೇಳೆ ಜೈಪುರದಲ್ಲಿ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕ್ರಿಕೆಟ್ ಅವಕಾಶ ನೀಡುವುದಾಗಿ 17 ವರ್ಷದ ಯುವತಿಯನ್ನು ನಂಬಿಸಿ ದಯಾಳ್ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಕೆಲವೇ ದಿನಗಳ ಅಂತರದಲ್ಲಿ ದಯಾಳ್ ವಿರುದ್ಧ ದಾಖಲಾದ ಎರಡನೇ ಆರೋಪ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್