ನವದೆಹಲಿ: ಇಂಗ್ಲೆಂಡ್ ವಿರುದ್ಧದ ನಿನ್ನೆಯ ಪಂದ್ಯಾಟದ ವೇಳೆ ಬಲಗಾಲಿಗೆ ಗಂಭೀರ ಗಾಯವಾಗಿ ಹೊರನಡೆದಿದ್ದ ರಿಷಬ್ ಪಂತ್ ಇಂದು ಕುಂಟುತ್ತಲೇ ಆಟವನ್ನು ಮುಂದುವರೆಸಲು ಗ್ರೌಂಡ್‌ಗೆ ಇಳಿದಿದ್ದಾರೆ.
ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ 1 ನೇ ದಿನದಂದು ಬಲಗಾಲಿಗೆ ಗಾಯ ಮಾಡಿಕೊಂಡಿದ್ದ ರಿಷಬ್ ಪಂತ್ ಇಂದಿನ ಪಂದ್ಯಾಟಕ್ಕೆ ವಾಪಾಸ್ಸಾಗುವು ಡೌಟ್ ಎನ್ನಲಾಗಿತ್ತು. ಆದರೆ ಪಂತ್ ಚಿಕಿತ್ಸೆ ಬಳಿಕ ಮತ್ತೇ ಬ್ಯಾಟ್ ಹಿಡಿದಿದ್ದಾರೆ.
88ಎಸೆತಗಳಲ್ಲಿ 44ರನ್ಗ ಗಳಿಸಿ ಜೌಟ್ ಆದ ಶಾರ್ದೂಲ್ ಠಾಕೂರ್ ಬಳಿಕ ರಿಷಬ್ ಪಂತ್ ಗ್ರೌಂಡ್‌ಗಿಳಿದಿದ್ದಾರೆ. ಮೈದಾನಕ್ಕೆ ನಮಸ್ಕರಿಸಿ ರಿಷಬ್ ಪಂತ್ ಬರುತ್ತಿದ್ದ ಹಾಗೇ ಕ್ರೀಡಾಂಗಣದಲ್ಲಿ ಚಪ್ಪಾಳೆ, ಕೂಗು ಜೋರಾಗಿ ಕೇಳಿಬಂದಿದೆ.
ರಿಷಬ್ ಪಂಯ್ ಆರೋಗ್ಯದ ದೃಷ್ಟಿಯಲ್ಲಿ ಉಳಿದ ಪಂದ್ಯಕ್ಕೆ ವಿಕೆಟ್ ಕೀಪಿಂಗ್ ಕರ್ತವ್ಯವನ್ನು ನಿರ್ವಹಿಸುವುದಿಲ್ಲ ಎಂದು ಬಿಸಿಸಿಐ ಗುರುವಾರ ಖಚಿತಪಡಿಸಿದೆ.
ಬದಲಾಗಿ, ಧ್ರುವ್ ಜುರೆಲ್ ಕೈಗವಸುಗಳನ್ನು ವಹಿಸಿಕೊಳ್ಳಲಿದ್ದಾರೆ. ಹಿನ್ನಡೆಯ ಹೊರತಾಗಿಯೂ, ಪಂತ್ 2 ನೇ ದಿನದಂದು ತಂಡವನ್ನು ಮತ್ತೆ ಸೇರಿಕೊಂಡಿದ್ದು, ಕ್ರೀಡಾಸ್ಪೂರ್ತಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.