Publish Date: Thu, 19 Sep 2024 (13:45 IST)
Updated Date: Thu, 19 Sep 2024 (13:53 IST)
ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗ ಮತ್ತು ರಿಷಬ್ ಪಂತ್ ಮತ್ತು ಬಾಂಗ್ಲಾದೇಶ ವಿಕೆಟ್ ಕೀಪರ್ ಲಿಟನ್ ದಾಸ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇಂದು ಮೊದಲ ದಿನದಾಟದಲ್ಲಿ ಹಸನ್ ಮಹಮೂದ್ ಬೌಲಿಂಗ್ ನಲ್ಲಿ ಭಾರತದ ಅಗ್ರ ಕ್ರಮಾಂಕ ದಿಂಡಿರುಳಿತ್ತು. ಈ ನಡುವೆ ರಿಷಬ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಎಚ್ಚರಿಕೆ ಆಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ರಿಷಬ್ ಪಂತ್ ಕ್ರೀಸ್ ನಲ್ಲಿ ಎಂದಿನಂತೆ ಚುರುಕಾಗಿ ಓಡಿ ರನ್ ಗಳಿಸುವ ಮೂಲಕ ಗಮನ ಸೆಳೆದರು.
ರಿಷಬ್ ಅಪಾಯಕಾರಿಯಾಗುತ್ತಿರುವುದನ್ನು ಸಹಿಸದೇ ಲಿಟನ್ ದಾಸ್ ಬೇಕೆಂದೇ ರಿಷಬ್ ದೇಹಕ್ಕೆ ತಾಗುವಂತೆ ಬಾಲ್ ಎಸೆದಿದ್ದಾರೆ. ಇದು ಮಿಸ್ ಫೀಲ್ಡ್ ಆಗಿ ಭಾರತೀಯ ಬ್ಯಾಟಿಗರು ಒಂಟಿ ರನ್ ಕದ್ದರು. ರನ್ ಗಳಿಸಿದ ಬಳಿಕ ಲಿಟನ್ ದಾಸ್ ಬಳಿ ಬಂದ ರಿಷಬ್ ಅವನಿಗೆ ಎಸೆ, ನನ್ನ ಮೇಲೆ ಯಾಕೆ ಚೆಂಡು ಎಸೆಯುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಲಿಟನ್ ದಾಸ್ ಮುಂದೆ ವಿಕೆಟ್ ಇದೆ ಅದಕ್ಕೆ ಎಸೆದಿದ್ದೇನೆ ಎಂದಿದ್ದಾರೆ.
ಬಳಿಕ ರಿಷಬ್ ಇನ್ನೊಂದು ತುದಿಯಲ್ಲಿದ್ದ ಜೈಸ್ವಾಲ್ ನತ್ತ ತಿರುಗಿ ನನಗೇ ಹೊಡೆಯುತ್ತಿದ್ದಾನೆ ಎಂದಿದ್ದಾರೆ. ಇವರಿಬ್ಬರ ಮಾತಿನ ಚಕಮಕಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.