Select Your Language

Notifications

webdunia
webdunia
webdunia
webdunia

D Gukesh: ವಿಶ್ವದ ನಂ 1 ಕಾರ್ಲ್ಸನ್ ಗೆ ಸೋಲುಣಿಸಿದ ಭಾರತದ ಚೆಸ್ ಚತುರ ಡಿ ಗುಕೇಶ್

D Gukesh
ನವದೆಹಲಿ: ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ಸನ್ ಗೆ ಭಾರತ ದ ಚೆಸ್ ಚತುರ ಡಿ ಗುಕೇಶ್ ನಾರ್ವೆಯಲ್ಲಿ ನಡೆಯುತ್ತಿರುವ ಚೆಸ್ ಟೂರ್ನಿಯ 6 ನೇ ಸುತ್ತಿನ ಕ್ಲಾಸಿಕ್ ಪಂದ್ಯದಲ್ಲಿ ಸೋಲುಣಿಸಿದ್ದಾರೆ.

ಇದೇ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಗುಕೇಶ್ ಕಾರ್ಲ್ಸನ್ ಎದುರು ಸೋತಿದ್ದರು. ಆದರೆ ಆರನೇ ಸುತ್ತಿನಲ್ಲಿ ನಂಬರ್ 1 ಪಟುವಿಗೇ ಸೋಲುಣಿಸಿ ಗುಕೇಶ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.  ಮೊದಲ ಸುತ್ತಿನಲ್ಲಿ ಗುಕೇಶ್ ನನ್ನು ಸೋಲಿಸಿದ  ಬಳಿಕ ಕಾರ್ಲ್ಸನ್ ಸೋಷಿಯಲ್ ಮೀಡಿಯಾದಲ್ಲಿ ರಾಜನ ಮುಂದೆ ಆಡುವಾಗ ನೀವು ತಪ್ಪಿಸಿಕೊಳ್ಳಬಾರದು ಎಂದು ಸಂದೇಶ ಬರೆದು ಅಣಕಿಸಿದ್ದರು.

ಇದೀಗ ಅದೇ ಕಾರ್ಲ್ಸನ್ ರನ್ನು ಗುಕೇಶ್ ಸೋಲಿಸಿದ್ದಾರೆ. ಬಿಳಿ ಕಾಯಿಗಳನ್ನು ಮುನ್ನಡೆಸಿದ ಗುಕೇಶ್ ಇಂದು ತಮ್ಮ ತಾಳ್ಮೆ, ಏಕಾಗ್ರತೆಯಿಂದಲೇ ಗೆದ್ದಿದ್ದಾರೆ. ತಾಳ್ಮೆಯಿಂದಲೇ ಗುಕೇಶ್ ಒತ್ತಡ ನಿಭಾಯಿಸಿದರು. ಆದರೆ ಗುಕೇಶ್ ಎದುರು ಇಂದು ತಾಳ್ಮೆ ಕಳೆದುಕೊಂಡು ಕಾರ್ಲ್ಸನ್ ಒತ್ತಡಕ್ಕೆ ಒಳಗಾದರು.

ಇದರ ಲಾಭ ಪಡೆದ ಗುಕೇಶ್ ಎದುರಾಳಿಯನ್ನ ಮಣಿಸುವಲ್ಲಿ ಯಶಸ್ವಿಯಾದರು. ಗುಕೇಶ್ ವಿರುದ್ಧ ಸೋತ ಕಾರ್ಲ್ಸನ್ ನಿರಾಸೆಯಲ್ಲಿ ಮೇಜು ಕುಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Shreyas Iyer: ಶ್ರೇಯಸ್ ಅಯ್ಯರ್ ಐಪಿಎಲ್ ನ ಯಶಸ್ವೀ ನಾಯಕ ಎನ್ನುವುದಕ್ಕೆ ಇದೇ ಸಾಕ್ಷಿ