Select Your Language

Notifications

webdunia
webdunia
webdunia
webdunia

ಸಕ್ಸಸ್‌ನೊಂದಿಗೆ ಟೀಕೆ ಸಹಜ, ಅದನ್ನು ಕಡೆಗಣಿಸುವಂತೆ ಗುಕೇಶ್‌ಗೆ ಕಿವಿಮಾತು ಹೇಳಿದ ವಿಶ್ವನಾಥ್ ಆನಂದ್‌

Legendary chess player Viswanathan Anand

Sampriya

ನವದೆಹಲಿ , ಶುಕ್ರವಾರ, 13 ಡಿಸೆಂಬರ್ 2024 (17:29 IST)
Photo Courtesy X
ನವದೆಹಲಿ: ಯಶಸ್ವಿನೊಂದಿಗೆ ಟೀಕೆಗಳು ಸಾಮಾನ್ಯ. ಅದನ್ನು ಕಡೆಗಣಿಸುವಂತೆ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್‌ ಅವರು ವಿಶ್ವ ಚೆಸ್ ಚಾಂಪಿಯನ್‌ಶಿಷ್ 2024ರ ವಿಜೇತ ಡಿ ಗುಕೇಶ್ ಅವರನ್ನು ಅವರನ್ನು ಅಭಿನಂದಿಸಿ, ಕಿವಿಮಾತು ಹೇಳಿದರು.

ಸಿಂಗಾಪುರದಲ್ಲಿ ನಡೆದ ಚಾಂಪಿಯನ್‌ಶಿಪ್‌ನ 14ನೇ ಮತ್ತು ಅಂತಿಮ ಪಂದ್ಯದಲ್ಲಿ ಲಿರೆನ್‌ರನ್ನು ಸೋಲಿಸಿ ವಿಶ್ವ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಗುಕೇಶ್‌ ಅವರು ಹೊಸ ಇತಿಹಾಸ ನಿರ್ಮಿಸಿದರು. ಆದರೆ ಈ ಸ್ಪರ್ಧೆಯ ಸುತ್ತಿನ ಬಗ್ಗೆ ಮಾಜಿ ವಿಶ್ವಚಾಂಪಿಯನ್‌ರಾದ ವ್ಲಾಡಿಮಿರ್ ಕ್ರಾಮ್ನಿಕ್,  ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಅವರು ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುಕೇಶ್‌ಗೆ ಕಿವಿಮಾತು ಹೇಳಿದ ವಿಶ್ವನಾಥನ್ ಅವರು ಗೆಲುವಿನ ಜತೆಗೆ  ಟೀಕೆಗಳು ಸಹಜ ಎಂದಿದ್ದಾರೆ.

ವಿಶ್ವ ಚೆಸ್‌ ಚಾಂಪಿನಯನ್‌ಶಿಪ್ 2024ರ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ವಿಶ್ವ ಚಾಂಪಿಯನ್ ವ್ಲಾಡಿಮಿರ್ ಕ್ರಾಮ್ನಿಕ್ ಅವರು ಪಂದ್ಯದ ಸಮಯದಲ್ಲಿ ಪ್ರದರ್ಶಿಸಲಾದ ಚೆಸ್‌ನ ಗುಣಮಟ್ಟ ನೋಡಿದಾಗ ಇದು ನಮಗೆ ತಿಳಿದಿರುವಂತೆ ಚೆಸ್‌ನ ಅಂತ್ಯ ಎಂದು ಹೇಳಿದ್ದಾರೆ. ಅದಲ್ಲದೆ ಡಿಂಗ್ ಲಿರೆನ್ ಮಾಡಿದ ನಿರ್ಣಾಯಕ ಪ್ರಮಾದವನ್ನು "ಬಾಲಿಶ" ಎಂದು ಕರೆದಿದ್ದಾರೆ.

ಐದು ಬಾರಿಯ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಕೂಡ ಸ್ಪರ್ಧೆಯ ಸುತ್ತುಗಳಲ್ಲಿ ಪ್ರದರ್ಶಿಸಲಾದ ಗುಣಮಟ್ಟವನ್ನು ಟೀಕಿಸಿದ್ದಾರೆ, "ಇದು ಇಬ್ಬರು ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧಿಗಳ ನಡುವಿನ ಆಟದಂತೆ ತೋರಲಿಲ್ಲ. ಇದು ಬಹುಶಃ ಎರಡನೇ ಸುತ್ತು ಅಥವಾ ಮೂರನೇ ಸುತ್ತಿನಂತೆಯೇ ಕಂಡಿತು ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಗುಕೇಶ್‌ಗೆ ಕಿವಿಮಾತು ಹೇಳಿದ ಚೆಸ್ ದಿಗ್ಗಜ ವಿಶ್ವನಾಥನ್ ಅವರು  "ನನಗೆ ತುಂಬಾ ಸಂತೋಷವಾಗಿದೆ. ನಾನು ನಿನ್ನೆ ಇತಿಹಾಸ ನಿರ್ಮಿಸುವುದನ್ನು ಅಕ್ಷರಶಃ ನೋಡುತ್ತಿದ್ದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

IND vs AUS Test: ನಾಳೆಯಿಂದಲೇ ಗಬ್ಬಾ ಟೆಸ್ಟ್ ಶುರು, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್