Select Your Language

Notifications

webdunia
webdunia
webdunia
webdunia

IND vs AUS Test: ನಾಳೆಯಿಂದಲೇ ಗಬ್ಬಾ ಟೆಸ್ಟ್ ಶುರು, ಹೇಗಿರಲಿದೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

Rohit Sharma

Krishnaveni K

ಬ್ರಿಸ್ಬೇನ್ , ಶುಕ್ರವಾರ, 13 ಡಿಸೆಂಬರ್ 2024 (16:23 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಾಳೆಯಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾವ ಬದಲಾವಣೆಯಿರಲಿದೆ ನೋಡೋಣ.

ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ಎರಡೂ ಇನಿಂಗ್ಸ್ ಗಳಲ್ಲಿ ಭಾರತದ ಬ್ಯಾಟಿಂಗ್ ಕಳಪೆಯಾಗಿತ್ತು. ಇದೇ ಕಾರಣಕ್ಕೆ ತಂಡ ಸೋಲು ಕಾಣಬೇಕಾಯಿತು. ಹಾಗಂತ ಈ ಪಂದ್ಯಕ್ಕೂ ತಂಡದ ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಆದರೆ ಗಬ್ಬಾ ಮೈದಾನ ವೇಗಿಗಳಿಗೆ ನೆರವು ನೀಡಲಿದೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ರವಿಚಂದ್ರನ್ ಅಶ್ವಿನ್ ರನ್ನು ಮತ್ತೆ ಹೊರಗಿಡುವ ಸಾಧ್ಯತೆಯಿದೆ. ಅವರ ಸ್ಥಾನದಲ್ಲಿ ರವೀಂದ್ರ ಜಡೇಜಾ ಅಥವಾ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ. ವೇಗದ ಬೌಲಿಂಗ್ ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.

ಭಾರತ ತಂಡ ವೇಗದ ಪಿಚ್ ಗೆ ಹೆದರುವುದಿಲ್ಲ ಎಂಬುದನ್ನು ಪರ್ತ್ ನಲ್ಲಿಯೇ ತೋರಿಸಿಕೊಟ್ಟಿದೆ. ಹೀಗಾಗಿ ಈ ಪಂದ್ಯದಲ್ಲೂ ವೇಗಿಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಭಾರತಕ್ಕೆ ಈ ಪಂದ್ಯವನನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಗಿನ ಜಾವ 5 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

D Gukesh: ಗರ್ಲ್ ಫ್ರೆಂಡ್ ಇದ್ದಾರೆಯೇ ಎಂದು ಕೇಳಿದ್ದಕ್ಕೆ ಗುಕೇಶ್ ಏನೆಂದು ಉತ್ತರಿಸಿದ್ದರು ಗೊತ್ತಾ