Select Your Language

Notifications

webdunia
webdunia
webdunia
webdunia

ಕ್ಯಾಪ್ಟನ್ ಬುಮ್ರಾನನ್ನು ಯಾಕೆ ಚೇಂಜ್ ಮಾಡಿದ್ರಿ, ಅನಿಲ್ ಕುಂಬ್ಳೆ ಸಿಟ್ಟು

Anil Kumble

Krishnaveni K

ಅಡಿಲೇಡ್ , ಭಾನುವಾರ, 8 ಡಿಸೆಂಬರ್ 2024 (10:07 IST)
Photo Credit: X
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ಕೋಚ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಇಲ್ಲದೆಯೂ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಈ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು ಕೂಡಾ. ಈ ಪಂದ್ಯದಲ್ಲಿ ಭಾರತದ ಪ್ರದರ್ಶನದ ಜೊತೆಗೆ ಆತ್ಮವಿಶ್ವಾಸವೂ ಉನ್ನತ ಮಟ್ಟದಲ್ಲಿತ್ತು.

ಆದರೆ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಕಮ್ ಬ್ಯಾಕ್ ಮಾಡಿದ್ದು ಭಾರತ ಎರಡೂ ಇನಿಂಗ್ಸ್ ಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಇದರ ಬಗ್ಗೆ ಅನಿಲ್ ಕುಂಬ್ಳೆ ವಿಮರ್ಶೆ ನಡೆಸಿದ್ದಾರೆ. ಟೀಂ ಇಂಡಿಯಾ ನಾಯಕತ್ವವನ್ನು ಯಾಕೆ ಬದಲಾಯಿಸಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ ತಂಡದ ಅಪ್ರೋಚ್ ಸಕಾರಾತ್ಮಕವಾಗಿತ್ತು. ಆತ್ಮವಿಶ್ವಾಸವೂ ಗರಿಷ್ಠ ಮಟ್ಟದಲ್ಲಿತ್ತು. ಅದ್ಭುತ ಗೆಲುವನ್ನೂ ಕಂಡಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಯಾಕೆ ಬದಲಾಯಿಸಿದಿರಿ, ಬುಮ್ರಾರೇ ಮುಂದುವರಿಯಬಹುದಿತ್ತಲ್ವಾ, ಅದೇ ಆಡುವ ಬಳಗವನ್ನೇ ಮುಂದುವರಿಸಬಹುದಿತ್ತಲ್ವಾ ಎಂದು ಕುಂಬ್ಳೆ ಪ್ರಶ್ನಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ರೋಹಿತ್ ಶರ್ಮಾ ಯಾಕಾದ್ರೂ ಬಂದರೋ, ಬುಮ್ರಾನೇ ಸಾಕಿತ್ತು ಎಂದ ಫ್ಯಾನ್ಸ್