Select Your Language

Notifications

webdunia
webdunia
webdunia
webdunia

ಮೊದಲೇ ಫಾರ್ಮ್ ಕಳೆಗುಂದಿದೆ, ಅದರ ಮೇಲೂ ವಿರಾಟ್ ಕೊಹ್ಲಿಗೆ ಕಾದಿದೆ ಮತ್ತೊಂದು ಆತಂಕ

Virat Kohli

Krishnaveni K

ಬ್ರಿಸ್ಬೇನ್ , ಶುಕ್ರವಾರ, 13 ಡಿಸೆಂಬರ್ 2024 (09:21 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಇದಕ್ಕೆ ಮೊದಲು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆತಂಕ ಹುಟ್ಟಿಸುವ ವಿಚಾರವೊಂದು ಸಿಕ್ಕಿದೆ.

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಇದಕ್ಕೆ ಮೊದಲು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ಈ ಸರಣಿಯಲ್ಲಿ ಒಂದು ಶತಕ ಸಿಡಿಸಿದ್ದು ಬಿಟ್ಟರೆ ಅವರಿಂದ ಉತ್ತಮ ಬ್ಯಾಟಿಂಗ್ ಬಂದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಅವರ ಕಳಪೆ ಫಾರ್ಮ್ ತಂಡದ ಚಿಂತೆಗೆ ಕಾರಣವಾಗಿದೆ.

ಇದರ ನಡುವೆ ಮೂರನೇ ಪಂದ್ಯ ನಡೆಯುವ ಗಬ್ಬಾ ಮೈದಾನದಲ್ಲಿ ಅವರ ದಾಖಲೆಯೂ ಚಿಂತಾಜನಕವಾಗಿದೆ. ಆಸ್ಟ್ರೇಲಿಯಾದ ಎಲ್ಲಾ ಮೈದಾನಗಳಲ್ಲಿ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಇಲ್ಲಿ ಮಾತ್ರ ಶತಕ ಸಿಡಿಸಿಲ್ಲ. 2014-15 ರ ಆಸ್ಟ್ರೇಲಿಯಾ ಟೂರ್ ನಲ್ಲಿ ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಗಳಿಸಿದ್ದು ಕೇವಲ 19 ರನ್.

ಹಿಂದಿನ ಸರಣಿಗಳಲ್ಲಿ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದರು. ಹಾಗಿದ್ದರೂ ಅಲ್ಲಿ ಅವರ ದಾಖಲೆ ಅಷ್ಟಕ್ಕಷ್ಟೇ. ಸದ್ಯದ ಅವರ ಫಾರ್ಮ್ ಕೂಡಾ ಕಳಪೆಯಾಗಿರುವುದು ನೋಡಿದರೆ ಹಿಂದಿನ ಕಳಪೆ ಪ್ರದರ್ಶನವೇ ಪುನರಾವರ್ತನೆಯಾಗದೇ ಇದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

D Gukesh: ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಹಿನ್ನೆಲೆ ತಿಳಿದರೆ ಬೆರಗಾಗುತ್ತೀರಿ