Select Your Language

Notifications

webdunia
webdunia
webdunia
webdunia

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಏಳುಮಲೆ ಕನ್ನಡ ಸಿನಿಮಾ ಹಾಡು

Sampriya

ಬೆಂಗಳೂರು , ಬುಧವಾರ, 30 ಜುಲೈ 2025 (20:04 IST)
ನಿರ್ದೇಶಕ ತರುಣ್ ಸುಧೀರ್ ನಿರ್ಮಾಣ ಮಾಡುತ್ತಿರುವ ಏಳುಮಲೆ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದು, ಇದೀಗ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. 

ಏಳುಮಲೆ ಚಿತ್ರದ ಯಾವಾಗ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.  ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲಿಯೂ ಗೀತೆಯನ್ನು ಅನಾವರಣ ಮಾಡಲಾಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ ಹಾಡಿಗೆ ಸಿದ್ ಶ್ರೀರಾಮ್ ಧ್ವನಿಯಾಗಿದ್ದಾರೆ. ಡಿ ಇಮ್ಮನ್ ಸಂಗೀತ ಒದಗಿಸಿದ್ದಾರೆ.

ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಯಾಗಿರುವ `ಏಳುಮಲೆ’ ಸಿನಿಮಾದಲ್ಲಿ ನಾಯಕನಾಗಿ ನಟಿ ರಕ್ಷಿತಾ ತಮ್ಮ ರಾಣಾ ಹಾಗೂ ನಾಯಕಿಯಾಗಿ ಮಹಾನಟಿ ಶೋ ವಿನ್ನರ್ ಪ್ರಿಯಾ ಆಚಾರ್ ಜೋಡಿಯಾಗಲಿದ್ದಾರೆ. 

ಸಹ ನಿರ್ದೇಶಕರಾಗಿ, ಗೀತ ಸಾಹಿತಿಯಾಗಿ `ಕಾಟೇರ’, `ಗುರುಶಿಷ್ಯರು’ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿರುವ ಪುನೀತ್ ರಂಗಸ್ವಾಮಿ ಈಗ `ಏಳುಮಲೆ’ ಸಿನಿಮಾದ ಮೂಲಕ ಪೂರ್ಣ ಪ್ರಮಾಣ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್