ಬೆಂಗಳೂರು: ಆಷಾಢ ಮಾಸದ ಕೊನೆಯ ದಿನವಾದ ಜುಲೈ 24 ರಂದು ಮುತ್ತೈದೆಯರು ಗಂಡನ ದೀರ್ಘಾಯುಷ್ಯಕ್ಕಾಗು ಮತ್ತು ಶ್ರೇಯಸ್ಸಿಗಾಗಿ ಪಾದ ಪೂಜೆಯನ್ನು ಮಾಡುತ್ತಾರೆ. ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳು ಭೀಮನ ಅಮಾವಾಸ್ಯೆಯನ್ನು ಆಚರಣೆ ಮಾಡಿದ್ದಾರೆ.
ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಲ್ ಮೊಂಥೆರೋ ಅವರು ಭೀಮನ ಅಮಾವಾಸ್ಯೆಯನ್ನು ಆಚರಿಸಿದ್ದಾರೆ. ಗಂಡನ ಪಾದ ಪೂಜೆ ಮಾಡಿದ ಫೋಟೋಗಳನ್ನು ಸೋನಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪಾದ ಪೂಜೆಯ ಫೋಟೋವನ್ನು ಹಂಚಿಕೊಂಡು ಅದಕ್ಕೆ ಚೆಂದದ ಅಡಿಬರವನ್ನು ನೀಡಿದ್ದಾರೆ.
"ನಿಮ್ಮಂತಹ ಪತಿ ಲಕ್ಷದಲ್ಲಿ ಒಬ್ಬ. ಇಂದು ಮಾತ್ರವಲ್ಲ, ನಿಮ್ಮ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ನಿರಂತರ ಸಂತೋಷಕ್ಕಾಗಿ ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದ ಸೋನಲ್ ಬರೆದುಕೊಂಡಿದ್ದಾರೆ,
ಇನ್ನೂ ಸೋನಲ್ ಅವರ ಆಚರಣೆ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿಯಾದರೂ ಎಷ್ಟು ಸಿಂಪಲ್ ಆಗಿ, ಸಂಪ್ರದಾಯವನ್ನು ಪಾಲಿಸಿದ್ದಾರೆ. ಇಬ್ಬರೂ ಹೀಗೇ ಖುಷಿಯಾಗಿರಿ ಎಂದು ಹಾರೈಸಿದ್ದಾರೆ.