ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲಿ ನಟ ದರ್ಶನ್ಗೆ ಇಂದು ಮಧ್ಯಂತರ ಜಾಮೀನು ಸಿಗುತ್ತಿದ್ದ ಹಾಗೇ ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ 6ವಾರಗಳ ಕಾಲ ಮಧ್ಯಂತರ ಜಾಮೀನು ಸಿಗುತ್ತಿದ್ದ ಹಾಗೇ ಪ್ರತಿಕ್ರಿಯಿಸಿದ ತರುಣ್ , ಈಗ ಮನಸ್ಸು ನಿರಾಳ ಆಗುತ್ತಿದೆ. ಅವರು ಈ ಪ್ರಕರಣದಲ್ಲಿ ಆರೋಪಿಯಷ್ಟೇ ಅಪರಾಧಿ ಅಲ್ಲ. ಮುಂದೆ ಅವರು ನಿರಪರಾಧಿ ಆಗಿ ಬಂದ್ಮೇಲೆ ಅನಾರೋಗ್ಯ ಸಮಸ್ಯೆಯಿಂದ ತೊಂದರೆ ಆಗಬಾರದು ಅಲ್ವೇ? ಎಂದಿದ್ದಾರೆ.
ನಾನು ಹಾಸನಾಂಬೆ ದೇವಿಯ ಬಳಿ ಕೇಳಿಕೊಂಡ ಹಾಗೇ ಸಾವಿರಾರು ಅವರ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅತ್ತಿಗೆ ತುಂಬಾನೇ ಕಷ್ಟ ಪಟ್ಟಿದ್ದಾರೆ. ಅವರ ಕಷ್ಟಕ್ಕೂ ದೇವರು ಸ್ಪಂದಿಸಿರಬಹುದು ಎಂದು ಪ್ರತಿಕ್ರಿಯಿಸಿದರು.
ದರ್ಶನ್ ಅವರಿಗೆ ಈ ಹಿಂದೆಯೂ ಬೆನ್ನುನೋವು ಸಮಸ್ಯೆ ಕಾಡಿತ್ತು. ಆದರೆ ಅವರು ನನ್ನ ಜತೆ ತೋರಿಸಿಕೊಂಡಿರಲಿಲ್ಲ. ಆ ನಂತರ ಬ್ಯಾಕ್ ಪೇನ್ ಇದೆ. ಸ್ಪೈನಲ್ ಸಮಸ್ಯೆ ಇದೆ ಅದಕ್ಕೆ ನಡೆಯೋದು ಕಷ್ಟ ಎಂದು ದರ್ಶನ್ ಶೂಟಿಂಗ್ ವೇಳೆ ಹೇಳಿಕೊಂಡಿದ್ದರು ಎಂದರು.