Select Your Language

Notifications

webdunia
webdunia
webdunia
webdunia

IIFA ಪ್ರಶಸ್ತಿ ಸಮಾರಂಭದಲ್ಲಿ ಕಮಾಲ್ ಮಾಡಿದ ದರ್ಶನ್ ಅಭಿನಯದ ಕಾಟೇರ

IIFAUtsavam2024

Sampriya

ಬೆಂಗಳೂರು , ಶನಿವಾರ, 28 ಸೆಪ್ಟಂಬರ್ 2024 (19:15 IST)
Photo Courtesy X
ಬೆಂಗಳೂರು: ಅಬುದಾಭಿಯಲ್ಲಿ ನಡೆಯುತ್ತಿರುವ ಐಐಎಫ್‌ಎ ಉತ್ಸವ 2024ರಲ್ಲಿ ಕನ್ನಡ ಚಿತ್ರರಂಗವು ವಿವಿಧ ಕೆಟಗಿರಿಯಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ದರ್ಶನ್ ಅಭಿನಯದ ಕಾಟೇರ ಸಿನಿಮಾ ಐಐಎಫ್‌ಎನಲ್ಲಿ 6ಪ್ರಶಸ್ತಿ ಗೆದ್ದು, ಕಮಾಲ್ ಮಾಡಿದೆ.

ಉತ್ತಮ ಸಿನಿಮಾ, ಉತ್ತಮ ನಿರ್ದೇಶಕ ತರುಣ್ ಸುಧೀರ್, ಬೆಸ್ಟ್ ಖಳನಾಯಕ ಜಗಪತಿ ಬಾಬು, ಬೆಸ್ಟ್‌ ಪೋಷಕ ನಟಿ ಶ್ರುತಿ ಕೃಷ್ಣ, ಅತ್ಯುತ್ತಮ ಚೊಚ್ಚಲ ನಟಿ ಆರಾಧನ, ಬೆಸ್ಟ್‌ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಅವಾರ್ಡ್‌ ಪಡೆದುಕೊಂಡಿದ್ದಾರೆ.

ಅವಾರ್ಡ್ ಸಮಾರಂಭದಲ್ಲಿ ತರುಣ್ ಸುಧೀರ್ ದಂಪತಿ, ರಾಕ್‌ಲೈನ್ ವೆಂಕಟೇಶ್ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದರು.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ತರುಣ್ ಸುಧೀರ್ ಅವರು ಪತ್ನಿಯ ಜತೆಗೆ ಪ್ರಶಸ್ತಿ ಸ್ವೀಕರಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.  

ಕಾಟೇರ ಸಿನಿಮಾ #IIFAUtsavam2024 ರಲ್ಲಿ ಪ್ರಶಸ್ತಿ ಪಡೆದಿರುವುದು ಗೆಲುವಿಗಿಂತ ಹೆಚ್ಚಿನದು. ಇದು ಸಿನಿಮಾದ ಮೇಲಿನ ನಮ್ಮ ಪ್ರೀತಿ ಮತ್ತು ಉತ್ಸಾಹದ ಆಚರಣೆಯಾಗಿದೆ. ಅಭಿನಂದನೆಗಳು ಮತ್ತು ಧನ್ಯವಾದಗಳು ಹುಡುಗರೇ. ಡಿಬಾಸ್ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ.


















Share this Story:

Follow Webdunia kannada

ಮುಂದಿನ ಸುದ್ದಿ

ಭೀಮ ಸಿನಿಮಾದ ಗಿರಿಜಾ ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ