Select Your Language

Notifications

webdunia
webdunia
webdunia
webdunia

ಭೀಮ ಸಿನಿಮಾದ ಗಿರಿಜಾ ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ

ಭೀಮ ಸಿನಿಮಾದ ಗಿರಿಜಾ ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ

Sampriya

ಬೆಂಗಳೂರು , ಶನಿವಾರ, 28 ಸೆಪ್ಟಂಬರ್ 2024 (18:20 IST)
Photo Courtesy X
ಬೆಂಗಳೂರು:  ಭೀಮ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಘರ್ಜಿಸಿದ ಗಿರಿಜಾ ಪಾತ್ರಧಾರಿ ಪ್ರಿಯಾ ಶಠಮರ್ಷಣ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋದಲ್ಲಿ ಪ್ರಿಯಾ ಅವರು ಕಂಪು ಅಂಗಿ ಹಾಗೂ ಹಸಿರು ಬಣ್ಣದ ಲುಂಗಿಯಲ್ಲಿ ವಿವಿಧ ಭಂಗಿಯಲ್ಲಿ ಪೋಟೋಗೆ ಪೋಸ್ ನೀಡಿದ್ದಾರೆ.

ನಟ ದುನಿಯಾ ವಿಜಯ್ ನಿರ್ದೇಶಿಸಿ, ಅಭಿನಯಿಸಿರುವ ಭೀಮ ಸಿನಿಮಾದಲ್ಲಿ ಪ್ರಿಯಾ ಅವರು ಪವರ್ ಫುಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ರಂಗಭೂಮಿ, ಕಿರುತೆರೆಯಲ್ಲಿ ಹೆಸರು ಮಾಡಿರುವ ಇವರಿಗೆ ಭೀಮ ಸಿನಿಮಾದ ಗಿರಿಜಾ ಪಾತ್ರದ ಅಭಿನಯ ಜನಮನ್ನಣೆ ಗಳಿಸಿಕೊಟ್ಟಿತು.

ಈ ನಟಿಯನ್ನು ಈಗ ಎಲ್ಲರೂ ಖಡಕ್ ಪೊಲೀಸ್ ಗಿರಿಜಾ ಅಂತಲೇ ಗುರುತಿಸುತ್ತಿದ್ದಾರೆ. ಸದ್ಯ ಪ್ರಿಯ ಅವರು ಹಂಚಿಕೊಂಡಿರುವ ಫೋಟೋದಲ್ಲಿ  ಭೈರತಿ ರಣಗಲ್ ಶಿವಣ್ಣನ ತಂಗಿ ತರ ಕಾಣಿಸುತ್ತಿದ್ದಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣಾವ್ರ ಕುಟುಂಬದ ಜತೆಗಿನ ಸವಿನೆನಪು ಹಂಚಿಕೊಂಡ ಸಚಿವ ಜಮೀರ್ ಅಹ್ಮದ್