Select Your Language

Notifications

webdunia
webdunia
webdunia
webdunia

ಧೂಳೆಬ್ಬಿಸಿದ ಎನ್‌ಟಿಆರ್‌ ಸಿನಿಮಾ ದೇವರ: ಮೊದಲ ದಿನವೇ ದಾಖಲೆ ಕಲೆಕ್ಷನ್‌

Junior NTR

Sampriya

ಹೈದರಾಬಾದ್ , ಶನಿವಾರ, 28 ಸೆಪ್ಟಂಬರ್ 2024 (14:52 IST)
Photo Courtesy X
ಹೈದರಾಬಾದ್​: ಜೂನಿಯರ್‌ ಎನ್ ಟಿಆರ್ ನಟನೆಯ ಬಹು ನಿರೀಕ್ಷಿತ ದೇವರ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇವರ ಚಿತ್ರ ಮೊದಲ ದಿನ ವಿಶ್ವದಾದ್ಯಂತ ಒಟ್ಟು 172 ಕೋಟಿ (ಮೊದಲ ದಿನದ ಕಲೆಕ್ಷನ್) ಮಾಡಿದೆ. ಭಾರತದಲ್ಲಿ 70 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

ಕೊರಟಾಲ ಶಿವ ನಿರ್ದೇಶನದ ಈ ಆಕ್ಷನ್ ಮನರಂಜನಾ ಚಿತ್ರವು ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೀ ಸೇಲ್ ಬುಕ್ಕಿಂಗ್ ನಲ್ಲಿ ಸಹ ಹಲವು ದಾಖಲೆ ಬರೆದಿತ್ತು. ಈ ಸಿನಿಮಾ ಮೊದಲ ದಿನದ ಕಲೆಕ್ಷನ್ ದಾಖಲೆ ಬರೆದಿದೆ.

ದೇವರ ಚಿತ್ರದಲ್ಲಿ ಎನ್‌ಟಿಆರ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದು, ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದಾರೆ. ಚಿತ್ರಕ್ಕೆ ಬೆಂಬಲ ನೀಡಿದ ಪ್ರೇಕ್ಷಕರಿಗೆ ಎನ್ ಟಿಆರ್ ಧನ್ಯವಾದ ಹೇಳಿದ್ದಾರೆ.

ಅಭಿಮಾನಿಗಳ ಸಂಭ್ರಮದಿಂದ ನನ್ನ ಹೃದಯ ತುಂಬಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಯಾವಾಗಲೂ ಋಣಿಯಾಗಿದ್ದೇನೆ. ನೀವು ನನ್ನಂತೆಯೇ ಚಿತ್ರವನ್ನು ಆನಂದಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೈರ್ಯಶಾಲಿ ನಾಯಕರು ಇಷ್ಟ ಎಂದು ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ಸೈಫ್ ಅಲಿ ಖಾನ್