Publish Date: Sat, 31 Aug 2024 (18:33 IST)
Updated Date: Sat, 31 Aug 2024 (18:38 IST)
ಉಡುಪಿ: ತೆಲುಗು ನಟ ಜೂನಿಯರ್ ಎನ್‌ಟಿಆರ್, ನಟ ರಿಷಭ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಅವರು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜೂ ಎನ್‌ಟಿಆರ್ ಪತ್ನಿ, ತಾಯಿ ಮತ್ತು ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಇದ್ದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಜೂ ಎನ್‌ಟಿಆರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಟೋ ಹಂಚಿ, ಇದು ನಮ್ಮ ಅಮ್ಮನ ದೊಡ್ಡ ಕನಸ್ಸಾಗಿತ್ತು ಎಂದಿದ್ದಾರೆ.
ಅಮ್ಮನ ಹುಟ್ಟೂರು ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣಮಠದಲ್ಲಿ ದರ್ಶನ ಪಡೆಯಬೇಕೆಂಬುದು ನನ್ನ ತಾಯಿಯ ಬಹುದೊಡ್ಡ ಕನಸು, ಕೊನೆಗೂ ಈಡೇರಿದೆ. ಆಕೆಯ ಹುಟ್ಟುಹಬ್ಬ ಸೆಪ್ಟೆಂಬರ್ 2ರ ಮುಂಚೆ ಅದು ಈಡೇರಿದ್ದು,ನಾನು ಅವಳಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ.
ವಿಜಯ್ ಕಿರಗಂನದೂರು, ಸ್ನೇಹಿತ ಪ್ರಶಾಂತ್ ನೀಲ್, ಆತ್ಮೀಯ ಗೆಳೆಯ ರಿಷಭ್ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದಗಳು. ಇವರ ಉಪಸ್ಥಿತಿ ತುಂಬಾನೇ ಖುಷಿ ನೀಡಿತು ಎಂದು ಬರೆದುಕೊಂಡಿದ್ದಾರೆ.