Publish Date: Wed, 14 Aug 2024 (18:52 IST)
Updated Date: Wed, 14 Aug 2024 (18:55 IST)
ಆಂಧ್ರಪ್ರದೇಶ: ನಟ ಜೂನಿಯರ್ ಎನ್‌ಟಿಆರ್ ಅವರಿಗೆ ಚಿತ್ರದ ಶೂಟಿಂಗ್ ವೇಳೆ ಅಪಘಾತವಾಗಿ, ಆಸ್ಪತ್ರೆಗೆ ದಾಖಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ.
ಇದೀಗ ಜೂನಿಯರ್ ಎನ್‌ಟಿಆರ್ ಅವರ ಆರೋಗ್ಯದ ಬಗ್ಗೆ ಚಿತ್ರತಂಡ ಪ್ರಕರನೆ ಹೊರಡಿಸಿದೆ. ಅದರಲ್ಲಿ ನಟ ಜೂ.ಎನ್‌ಟಿಆರ್ ಅವರಿಗೆ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಗಾಯವಾಗಿದೆ. ಅವರು ಅದರಿಂದ ಸುಧಾರಿಸಿಕೊಂಡು ಒಂದೆರಡು ವಾರಗಳಲ್ಲಿ ಮತ್ತೇ ಶೂಟಿಂಗ್‌ನಲ್ಲಿ ಭಾಗವಹಿಸುತ್ತಾರೆ ಎಂದು ಸ್ಪಷ್ಟನೆ ನೀಡಿದೆ.
NTR @tarak9999 ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ಎಡಗೈ ಮಣಿಕಟ್ಟಿಗೆ ಸಣ್ಣ ಉಳುಕು ಉಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅವರ ಕೈಗೆ ಬ್ಯಾಡೆಂಜ್ ಹಾಕಲಾಗಿದೆ'' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನೂ ಅಚ್ಚರಿ ಏನೆಂದರೆ ಗಾಯವಿದ್ದರೂ ಎನ್‌ಟಿಆರ್ ನಿನ್ನೆ ರಾತ್ರಿ ದೇವರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪಾತ್ರವರ್ಗವು ಒಂದೆರಡು ವಾರಗಳಲ್ಲಿ ಆಫ್ ಆಗಲಿದೆ ಮತ್ತು ಅವರು ಶೀಘ್ರದಲ್ಲೇ ಕೆಲಸಕ್ಕೆ ಮರಳುತ್ತಾರೆ. ಈ ಮಧ್ಯೆ ಈ ಸಣ್ಣ ಗಾಯದ ಬಗ್ಗೆ ಊಹಾಪೋಹಗಳನ್ನು ತಪ್ಪಿಸಬೇಕೆಂದು ನಾವು ವಿನಂತಿಸುತ್ತೇವೆ ಎಂದು ಚಿತ್ರತಂಡ ಹೇಳಿದೆ.