Select Your Language

Notifications

webdunia
webdunia
webdunia
webdunia

ಜ್ಯೂನಿಯರ್ ಎನ್‌ಟಿಆರ್ ಸಿನಿಮಾದ ಶೂಟಿಂಗ್ ತಂಡದ ಮೇಲೆ ಹೆಜ್ಜೇನು ದಾಳಿ, ಹಲವರಿಗೆ ಗಾಯ

Junior NTR

Sampriya

ಬೆಂಗಳೂರು , ಮಂಗಳವಾರ, 7 ಮೇ 2024 (19:11 IST)
photo Courtesy Instagram
ಜೂನಿಯರ್ ಎನ್‌ ಟಿ ಆರ್ ನಟನೆಯ 'ದೇವರ' ಸಿನಿಮಾದ ಶೂಟಿಂಗ್ ಸೆಟ್ ಮೇಲೆ  ಹೆಜ್ಜೇನು ದಾಳಿ ನಡೆಸಿ, ಚಿತ್ರ ತಂಡದ ಹಲವು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಅದೃಷ್ಟವಶಾತ್ ಜೂನಿಯರ್ ಎನ್ ಟಿ ಆರ್ ಅವರು ವಾರ್ 2 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಿದ್ದರಿಂದ ಸದ್ಯ ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಶೂಟಿಂಗ್ ವೇಳೆ ಜೇನುಹುಳುಗಳ ಹಿಂಡು ದೇವರ ಚಿತ್ರ ತಂಡವನ್ನು ಗುರಿಯಾಗಿಸಿಕೊಂಡು ಏಕಾಏಕಿ ದಾಳಿ ನಡೆಸಿದೆ. ಅದೃಷ್ಟವಶಾತ್, ಎಲ್ಲಾ ಘಟಕದ ಸದಸ್ಯರು ಯಾವುದೇ ಅಪಾಯವಿಲ್ಲದೆ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಸೈಫ್ ಅಲಿಖಾನ್ ಪ್ರತಿನಾಯಕನಾಗಿ ನಟಿಸಿದ್ದಾರೆ. ಇನ್ನೂ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನ ಪಡೆದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಮೊದಲ ಸಲಾ ನಟಿ ಭಾಮ