Select Your Language

Notifications

webdunia
webdunia
webdunia
webdunia

ವಿಚ್ಛೇದನ ಪಡೆದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಮೊದಲ ಸಲಾ ನಟಿ ಭಾಮ

Bhama

Krishnaveni K

ಕೊಚ್ಚಿ , ಮಂಗಳವಾರ, 7 ಮೇ 2024 (12:39 IST)
Photo Courtesy: Twitter
ಕೊಚ್ಚಿ: ಮಲಯಾಳಂ ಮೂಲದ ನಟಿ ಭಾಮ ವಿಚ್ಛೇದನ ಪಡೆದುಕೊಂಡಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದಾರೆ. ಇನ್ನು ಮುಂದೆ ತಾನು ಸಿಂಗಲ್ ಮದರ್ ಎಂದು ಘೋಷಿಸಿಕೊಂಡಿದ್ದಾರೆ.

ಮಲಯಾಳಂ ಮೂಲದ ನಟಿ ಭಾಮ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಮೊದಲ ಸಲಾ ಎನ್ನುವ ಸಿನಿಮಾ ಮೂಲಕ ಚಿರಪರಿಚಿತರಾಗಿದ್ದರು. ಇದಾದ ಬಳಿಕ ಕನ್ನಡ, ಮಲಯಾಳಂನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿ ಸಿನಿ ರಸಿಕರಿಗೆ ಚಿರಪರಿಚಿತರಾಗಿದ್ದರು.

2020 ರಲ್ಲಿ ಉದ್ಯಮಿ ಅರುಣ್ ಜಗದೀಶ್ ಜೊತೆ ಭಾಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಓರ್ವ ಪುತ್ರಿಯೂ ಇದ್ದಾಳೆ. ಆದರೆ ಕೆಲವು ಸಮಯ ಮೊದಲು ದಂಪತಿ ಬೇರೆಯಾಗುತ್ತಿರುವ ಸುದ್ದಿ ಕೇಳಿಬಂದಿತ್ತು. ಇದೀಗ ಅಧಿಕೃತವಾಗಿ ಬೇರೆಯಾಗಿರುವ ಸುದ್ದಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಭಾಮ ‘ನಾನು ಎಷ್ಟು ಸ್ಟ್ರಾಂಗ್ ಆಗಿದ್ದೇನೆ ಎಂದು ನನಗೆ ಗೊತ್ತಿರಲಿಲ್ಲ. ನಾನೀಗ ಸಿಂಗಲ್ ಮದರ್. ನಾನು ನನ್ನ ಮಗಳನ್ನು ನೋಡಿಕೊಳ್ಳಲು ಈಗ ಅದೊಂದೇ ದಾರಿ ನನಗಿರುವುದು’ ಎಂದು ಭಾಮ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶವವಾಗಿ ಪತ್ತೆಯಾದ ಸಹನಾ, ಮುಗಿಲು ಮುಟ್ಟಿತು ಪುಟ್ಟಕ್ಕನ ಆಕ್ರಂದನ