Select Your Language

Notifications

webdunia
webdunia
webdunia
webdunia

ಶವವಾಗಿ ಪತ್ತೆಯಾದ ಸಹನಾ, ಮುಗಿಲು ಮುಟ್ಟಿತು ಪುಟ್ಟಕ್ಕನ ಆಕ್ರಂದನ

Puttakka Serial

Sampriya

, ಸೋಮವಾರ, 6 ಮೇ 2024 (20:11 IST)
photo Courtesy Instagram
ಮುರಳಿ ಮನೆಗೆ ವಾಪಾಸ್ಸು ಹೋಗಿ ಜೀವನ ನಡೆಸಲು ರೆಡಿ ಇಲ್ಲದೆ ತಾಯಿಗೆ ಭರವಾಗುತ್ತೆನೆಂದು ಮನೆಬಿಟ್ಟು ಹೊರಟ ಸಹನಾ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಪುಟ್ಟಕನ ಮಕ್ಕಳುʼ ಸೀರಿಯಲ್ ಟಾಪ್ ರೇಟಿಂಗ್‌ನಲ್ಲಿ ಮುನ್ನುಗ್ಗುತ್ತಿದ್ದು, ಇದೀಗ ಸಹನಾಳ ಕೇಂದ್ರಿಕರಿಸಿದ ಕಥೆ  ಸತತ ಎರಡನೇ ವಾರ ಒಳ್ಳೆಯ ಟಿಆರ್‌ಪಿ ಯಲ್ಲಿ ಒಳ್ಳೆಯ ರೇಟಿಂಗ್ ಕಂಡಿದೆ.

ಸದ್ಯ ಪುಟ್ಟಕ್ಕನ ಮನೆ ಬಿಟ್ಟು ಹೋದ ಮಗಳು ಸಹನಾ ಸಿಟಿ ಬಸ್ ಹತ್ತಿದ್ದಾಳೆ. ಮನೆಯವರ ತೀವ್ರ ಹುಡುಕಾಟದ ನಂತರ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಇದೀಗ ಸಹನಾ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಳಬೇಕಾದ ಮಗಳು ಶವವಾಗಿ ಪತ್ತೆಯಾಗಿರುವುದನ್ನು ಕಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ.

ಸಹನಾ ಸಾವನ್ನಪ್ಪಿರುವುದನ್ನು ಅರಗಿಸಿಕೊಳ್ಳಲಾಗದೆ ಪುಟ್ಟಕ್ಕ ಎದ್ದು ಬಾರವ್ವ, ಇನ್ಮೇಲೆ ನಿನ್ನನ್ನು ಅತ್ತೆ ಮನೆಗೆ ಕಳಿಸಲ್ಲ, ನನ್ನ ಜತೆನೆ ಇರು ಎಂದು ಗೋಳಾಡಿದ್ದಾಳೆ.  ನನ್ನ ಪ್ರಾಣ ಯಾಕೆ ಉಳಿದ್ದೀಯಾ ಚಾಮುಂಡವ್ವ ಎಂದು ಕಣ್ಣೀರು ಹಾಕಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಚಕ್ಕೆ ಕರೆದ ನಿರ್ದೇಶಕನ ವಿರುದ್ಧ ಠಾಣೆ ಮೆಟ್ಟಿಲೇರಿದ ನಟಿ ಅಮೂಲ್ಯ ಗೌಡ