ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿ ಕೊನೇ ದಿನದ ಶೂಟಿಂಗ್ ನಡೆದಿದ್ದು, ಈ ವಾರವೇ ಧಾರವಾಹಿ ಅಂತ್ಯ ಕಾಣುತ್ತಿದೆ.
ಇದರ ನಡುವೆಯೇ ಜೀ ವಾಹಿನಿ ಮತ್ತೆ ಮೂರು ಧಾರವಾಹಿಗಳನ್ನು ಕೊನೆಗೊಳಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿ ಕೇಳಿಬಂದಿದೆ. ಜೊತೆ ಜೊತೆಯಲಿ ಬಳಿಕ ಟಿಆರ್ ಪಿ ಕುಸಿತ ಕಂಡಿರುವ ಮತ್ತೊಂದು ಧಾರವಾಹಿ ಎಂದರೆ ಪಾರು.
ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿದ್ದ ಧಾರವಾಹಿ ಈಗ ಭಾರೀ ಹಿನ್ನಡೆ ಅನುಭವಿಸಿದೆ. ಹೀಗಾಗಿ ಈ ಧಾರವಾಹಿಯೂ ಶೀಘ್ರದಲ್ಲೇ ಮುಕ್ತಾಯ ಕಾಣಲಿದೆ. ಇದಲ್ಲದೆ, ಇತ್ತೀಚೆಗೆ ಪ್ರೇಕ್ಷಕರ ಕುಸಿತ ಕಂಡಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯೂ ಕೊನೆಯಾಗುವ ಸಾಧ‍್ಯತೆಯಿದೆ. ಇದಲ್ಲದೆ, ಜೀ ಕನ್ನಡದ ಟಾಪ್ 2 ಧಾರವಾಹಿಯಾಗಿರುವ ಗಟ್ಟಿಮೇಳ ಧಾರವಾಹಿಯನ್ನೂ ಕೆಲವು ಸಮಯದ ನಂತರ ಪ್ರಸಾರ ಸ್ಥಗಿತಗೊಳಿಸಲು ತೀರ್ಮಾನವಾಗಿದೆ ಎಂಬ ಸುದ್ದಿ ಬಂದಿದೆ. ಗಟ್ಟಿಮೇಳ ಧಾರವಾಹಿಗೆ ಟಿಆರ್ ಪಿ ಬರುತ್ತಿದ್ದರೂ ಸಾವಿರ ಕಂತು ಮುಗಿಸಿರುವ ಧಾರವಾಹಿಯಾಗಿದ್ದರಿಂದ ಇದನ್ನು ಕೊನೆಗೊಳಿಸಿ ಅದೇ ನಿರ್ಮಾಣ ಸಂಸ್ಥೆಯಿಂದ ಮತ್ತೊಂದು ಧಾರವಾಹಿ ಆರಂಭವಾಗುವ ನಿರೀಕ್ಷೆಯಿದೆ.