Select Your Language

Notifications

webdunia
webdunia
webdunia
webdunia

ಬೈಕ್ ಸವಾರಿ ಮಾಡಿ ಸಂಕಷ್ಟಕ್ಕೀಡಾದ ಅಮಿತಾಭ್ ಬಚ್ಚನ್, ಅನುಷ್ಕಾ ಶರ್ಮಾ

ಬೈಕ್ ಸವಾರಿ ಮಾಡಿ ಸಂಕಷ್ಟಕ್ಕೀಡಾದ ಅಮಿತಾಭ್ ಬಚ್ಚನ್, ಅನುಷ್ಕಾ ಶರ್ಮಾ
ಮುಂಬೈ , ಮಂಗಳವಾರ, 16 ಮೇ 2023 (17:24 IST)
Photo Courtesy: Twitter
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ನಟಿ ಅನುಷ್ಕಾ ಶರ್ಮಾ ಸಾಮಾನ್ಯರಂತೇ ಬೈಕ್ ಸವಾರಿ ಮಾಡಿ ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮುಂಬೈ ಟ್ರಾಫಿಕ್ ಗೆ ಬೇಸತ್ತು ಇಬ್ಬರೂ ಸ್ಟಾರ್ ಗಳು ಕಾರು ಬಿಟ್ಟು ಸವಾರರೊಬ್ಬರ ಹಿಂದೆ ಕೂತು ಬೈಕ್ ಸವಾರಿ ಮಾಡಿದ್ದಾರೆ. ಈ ಫೋಟೋಗಳನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಸಂಚಾರ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಇದನ್ನು ಗಮನಿಸಿದ ಪೊಲೀಸರು ಈಗ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟಲು ಸೂಚನೆ ನೀಡಿದ್ದಾರೆ. ಯಾಕೆಂದರೆ ಇಬ್ಬರೂ ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿರಲಿಲ್ಲ. ಜನರಿಗೆ ಮಾದರಿಯಾಗಬೇಕಾದ ಸೆಲೆಬ್ರಿಟಿಗಳೇ ನಿಯಮ ಮರೆತರೆ ಹೇಗೆ ಎಂದು ಪೊಲೀಸರು ದಂಡ ಕಟ್ಟಲು ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟು ಮುದ್ದಾಗಿದ್ದಾಳೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗಳು!