Select Your Language

Notifications

webdunia
webdunia
webdunia
webdunia

ಜ್ಯೋತಿಕಾ ಬಾಲಿವುಡ್ ಸಿನಿಮಾಗೆ ನಾಯಕಿ

ಜ್ಯೋತಿಕಾ ಬಾಲಿವುಡ್ ಸಿನಿಮಾಗೆ ನಾಯಕಿ
ಮುಂಬೈ , ಮಂಗಳವಾರ, 16 ಮೇ 2023 (08:30 IST)
ಮುಂಬೈ: ತಮಿಳು ಸ್ಟಾರ್ ಸೂರ್ಯ ಪತ್ನಿ, ಬಹುಭಾಷಾ ನಟಿ ಜ್ಯೋತಿಕಾ ಇದೀಗ ಬಾಲಿವುಡ್ ಸಿನಿಮಾವೊಂದಕ್ಕೆ ನಾಯಕಿಯಾಗುತ್ತಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಸೌತ್ ನಟ-ನಟಿಯರು ಪ್ರಮುಖ ಪಾತ್ರ ವಹಿಸುತ್ತಿರುವುದು ಮಾಮೂಲಾಗಿದೆ. ಆದರೆ ಜ್ಯೋತಿಕಾ ಮದುವೆ, ಮಕ್ಕಳ ಬಳಿಕ ಅಪರೂಪಕ್ಕೆ ನಟಿಸುತ್ತಿದ್ದರು. ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ತಮಿಳಿನಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ ಜ್ಯೋತಿಕಾ ನಟನೆಯಿಂದ ದೂರವೇ ಇದ್ದರು. ಕೇವಲ ನಿರ್ಮಾಪಕಿಯಾಗಿ ಪತಿ ಜೊತೆ ಸಕ್ರಿಯರಾಗಿದ್ದರು.

ಆದರೆ ಈಗ ಬಾಲಿವುಡ್ ನ ವಿಕಾಸ್ ಬಹ್ಲ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ಅಜಯ್ ದೇವಗನ್ ಗೆ ನಾಯಕಿಯಾಗುತ್ತಿದ್ದಾರೆ. ಜೂನ್ ನಲ್ಲಿ ಸಿನಿಮಾ ಸೆಟ್ಟೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ತಿರಸ್ಕರಿಸಿದ್ದ ಟಾಪ್ ಸಿನಿಮಾಗಳು