Publish Date: Tue, 16 May 2023 (08:00 IST)
Updated Date: Tue, 16 May 2023 (08:15 IST)
ಹೈದರಾಬಾದ್: ಕೆಲವೊಮ್ಮೆ ಸ್ಟಾರ್ ನಟರು ಯಾವುದೋ ಕಾರಣಕ್ಕೆ ಸಿನಿಮಾ ತಿರಸ್ಕರಿಸುತ್ತಾರೆ. ಆದರೆ ಇನ್ನೊಬ್ಬ ನಟ ಆ ಪಾತ್ರ ಮಾಡಿ ಸಿನಿಮಾ ಹಿಟ್ ಆಗುತ್ತದೆ. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಈ ರೀತಿ ರಿಜೆಕ್ಟ್ ಮಾಡಿ ಹಿಟ್ ಆದ ಸಿನಿಮಾಗಳು ಯಾವುವು ನೋಡೋಣ.
ನಿತಿನ್ ಗೆ ಬ್ರೇಕ್ ಕೊಟ್ಟ ಜಯಂ ಸಿನಿಮಾ ಮೊದಲು ಅಲ್ಲು ಅರ್ಜುನ್ ಮಾಡಬೇಕಿತ್ತು. ಆದರೆ ಅಲ್ಲು ಈ ಸಿನಿಮಾವನ್ನು ತಿರಸ್ಕರಿಸಿದ್ದರು. ನಿತಿನ್ ಕ್ಲಿಕ್ ಆದರು. ಅದೇ ರೀತಿ ರವಿ ತೇಜ ನಾಯಕರಾಗಿದ್ದ ಭದ್ರ ಸಿನಿಮಾದ ಆಫರ್ ಕೂಡಾ ಮೊದಲು ಅಲ್ಲು ಅರ್ಜುನ್ ಗೆ ಬಂದಿತ್ತು.
ಇದಲ್ಲದೆ, ನಾಗ ಚೈತನ್ಯ ನಾಯಕರಾಗಿರುವ 100% ಲವ್, ವಿಜಯ್ ದೇವರಕೊಂಡಗೆ ಬ್ರೇಕ್ ಕೊಟ್ಟ ಅರ್ಜುನ್ ರೆಡ್ಡಿ, ನಾನಿ ನಟಿಸಿದ್ದ ಗ್ಯಾಂಗ್ ಲೀಡರ್, ವಿಜಯ್ ದೇವರಕೊಂಡ ನಾಯಕರಾಗಿದ್ದ ಗೀತ ಗೋವಿಂದಂ, ಸಿದ್ಧಾರ್ಥ್ ನಾಯಕರಾಗಿದ್ದ ಬೊಮ್ಮರಿಲು ಮುಂತಾದ ಹಿಟ್ ಸಿನಿಮಾಗಳ ಆಫರ್ ಮೊದಲು ಅಲ್ಲು ಅರ್ಜುನ್ ಗೆ ಬಂದಿತ್ತು. ಆದರೆ ಅವರು ನಿರಾಕರಿಸಿದ್ದರಿಂದ ಬೇರೆಯವರ ಪಾಲಾಯ್ತು.