Publish Date: Thu, 29 Aug 2024 (17:08 IST)
Updated Date: Thu, 29 Aug 2024 (17:12 IST)
ಬೆಂಗಳೂರು: ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ನಂತರ ಕಾಂತಾರ ಸಿನಿಮಾವನ್ನು ಮತ್ತೇ ಮರು ಬಿಡುಗಡೆ ಮಾಡಲು ಹೊಂಬಾಳೆ ಫಿಲಂಸ್ ಚಿಂತಿಸಿದೆ. ಅದರಂತೆ ನಾಳೆ ಮುಂಬೈನಲ್ಲಿ ಕಾಂತಾರ ಸಿನಿಮಾದ ಮತ್ತೇ ಥಿಯೇಟರ್‌ಗೆ ಲಗ್ಗೆಯಿಡಲು ಸಿದ್ಧವಾಗಿದೆ.
ಇದರಿಂದ ಅಭಿಮಾನಿಗಳಿಗೆ ಮತ್ತೇ ಚಲನಚಿತ್ರವನ್ನು ಅನುಭವಿಸುವ ಅವಕಾಶವನ್ನು ಹೊಂಬಾಳೆ ಫಿಲಂಸ್ ನೀಡುತ್ತಿದೆ. ಕಾಂತಾರ ಸಿನಿಮಾದಲ್ಲಿ ನಟ ರಿಷಭ್ ಶೆಟ್ಟಿ ಅವರ ನೈಜ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಬಳಿಕ ಮತ್ತೇ ಇದೀಗ ಈ ಸಿನಿಮಾವನ್ನು ಮತ್ತೇ ಮರು ಬಿಡುಗಡೆ ಮಾಡಲಿದೆ.
ಈ ಮರು-ಬಿಡುಗಡೆಯು ಚಿತ್ರದಲ್ಲಿನ ಕಾಡುಬೆಟ್ಟು ಶಿವನ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಪಡೆದ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯಿಂದ ಸ್ಫೂರ್ತಿ ಪಡೆದಿದ್ದಾರೆ, ಇದು ಚಿತ್ರದ ಅಸಾಧಾರಣ ಗುಣಮಟ್ಟವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.
ಕರಾವಳಿ ಸೊಗಡಿನಲ್ಲಿ ಮೂಡಿಬಂದ ಈ ಕಾಂತಾರ ಸಿನಿಮಾ ಭಾರತ ಚಿತ್ರೋದ್ಯಮದಲ್ಲಿ ಹೊಸ ಸಂಚಲನವನ್ನು ಹುಟ್ಟು ಹಾಕಿತು. 16 ಬಜೆಟ್‌ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ 450ಕೋಟಿ ಕಲೆಕ್ಷನ್ ಮಾಡಿ, ಹೊಸ ಇತಿಹಾಸವನ್ನು ಸೃಷ್ಟಿಸಿತು.
ಈ ಸಿನಿಮಾಗೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿ ನಟಿಸಿದ್ದರು. ಸಿನಿಮಾದಲ್ಲಿ ಕಿಶೋರ್ ಕುಮಾರ್ ಜಿ, ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ ಅವರ ಗಮನಾರ್ಹ ಅಭಿನಯವನ್ನು ಹೊಂದಿದೆ. ಇದೀಗ ಕಾಂತಾರ ಪ್ರೀಕ್ವೆಲ್ ಶೂಟಿಂಗ್‌ನಲ್ಲಿ ನಟ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದು, ಅದಕ್ಕಿಂತಲೂ ವಿಭಿನ್ನವಾಗಿ ಮೂಡಿಬರಲಿದೆ ಎನ್ನಲಾಗಿದೆ.