Select Your Language

Notifications

webdunia
webdunia
webdunia
webdunia

ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿಯಾದ ಮಲಯಾಳಂ ಖ್ಯಾತ ನಟ ಮೋಹನ್‌ ಲಾಲ್

Actor Rishabh Shetty Meets MohanLal

Sampriya

ಬೆಂಗಳೂರು , ಗುರುವಾರ, 18 ಏಪ್ರಿಲ್ 2024 (15:13 IST)
ಬೆಂಗಳೂರು:   ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ಅವರು ನಿನ್ನೆ ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದ ಬೆನ್ನಲ್ಲೇ  ಕಾಂಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ದಂಪತಿಯನ್ನು  ಭೇಟಿಯಾಗಿದ್ದಾರೆ.

ಭೇಟಿ ಫೋಟೋವನ್ನು ನಟ ರಿಷಬ್ ಶೆಟ್ಟಿ ಹಂಚಿಕೊಂಡು, ಲೆಜೆಂಡರಿಯನ್ನು ಭೇಟಿಯಾಗಿದ್ದು ತುಂಬಾನೇ ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಪತ್ನಿ ಪ್ರಗತಿ ಶೆಟ್ಟಿಯೂ ಇದ್ದಾರೆ.

ಇನ್ನೂ ರಿಷಬ್ ಅವರು ಕಾಂತಾರ 1 ಚಿತ್ರೀಕರಣದಲ್ಲಿ ಕುಂದಾಪುರದಲ್ಲಿದ್ದು, ಅಲ್ಲಿಯೇ ನಟರ ಭೇಟಿಯಾಗಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವಿಯ ಸನ್ನಿಧಿಯಲ್ಲಿ ಕೆಲಕಾಲ ಧ್ಯಾನ ಮಾಡಿದರು. ದೇವಿಗೆ ಮುಂಜಾನೆ ನಡೆಯುವ ಮಹಾಮಂಗಳಾರತಿಯಲ್ಲಿ ನಟ ಪಾಲ್ಗೊಂಡು ಕೆಲೊ ಕಾಲ ದೇವಸ್ಥಾನದಲ್ಲಿ ಸಮಯ ಕಳೆದರು.

ಇನ್ನು ನಟ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಹಾಗೇ ಅವರ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.

ಸದ್ಯ ಮೋಹನ್‌ಲಾಲ್ ಅವರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುಬ ಬಾರೋಜ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ ಇಡಿ ಸಂಕಷ್ಟ: 97 ಕೋಟಿ ರೂ. ಆಸ್ತಿ ವಶಕ್ಕೆ