Select Your Language

Notifications

webdunia
webdunia
webdunia
webdunia

'ಇಂಡಿಯನ್ 2' ಸಿನಿಮಾದಲ್ಲಿ ಕಮಲ್ ಹಾಸನ್‌ ಮೊಮ್ಮಗನಾಗಿ ನಟ ಸಿದ್ದಾರ್ಥ್!

Siddharth

Sampriya

ಆಂಧ್ರಪ್ರದೇಶ , ಬುಧವಾರ, 17 ಏಪ್ರಿಲ್ 2024 (18:19 IST)
Photo Courtesy X
'ಇಂಡಿಯನ್ 2' ಸಿನಿಮಾದಲ್ಲಿ ನಟ ಕಮಲ್ ಹಾಸನ್‌ಗೆ ಮೊಮ್ಮಗನಾಗಿ ತಮಿಳಿನ ನಟ ಸಿದ್ಧಾರ್ಥ್ ನಟಿಸಲಿದ್ದಾರೆ. ಇಂದು ಸಿದ್ಧಾರ್ಥ್ 45ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಚಿತ್ರತಂಡವೂ ಸಿದ್ಧಾರ್ಥ್ ಅವರ ಫೋಟೋ ಶೇರ್ ಮಾಡಿ ಶುಭಕೋರಿದ್ದಾರೆ.

ಕೆಂಪು ಮತ್ತು ಬಿಳಿ ಬಣ್ಣದ ಚೆಕ್ಸ್ ಶರ್ಟ್ ಧರಿಸಿರುವ ಸಿದ್ಧಾರ್ಥ್ ಫೋಟೋ ಶೇರ್ ಮಾಡಿ ನಿರ್ಮಾಣ ಸಂಸ್ಥೆ ಬರ್ತ್ಡೇ ವಿಶ್ಸ್ ತಿಳಿಸಿದೆ. ಮೂಲಗಳ ಪ್ರಕಾರ, ಚಿತ್ರದಲ್ಲಿ ಕಮಲ್ ಹಾಸನ್ ಮೊಮ್ಮಗನಾಗಿ ಸಿದ್ಧಾರ್ಥ್ ನಟಿಸಿದ್ದಾರೆ ಎನ್ನಲಾಗಿದೆ. ಸಿದ್ಧಾರ್ಥ್ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದೆ ಎನ್ನಲಾಗಿದೆ.

2003ರಲ್ಲಿ 'ಬಾಯ್ಸ್' ಎಂಬ ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸಿದ್ದರು. ಆ ಸಿನಿಮಾಗೆ ಎಸ್. ಶಂಕರ್ ನಿರ್ದೇಶನ ಮಾಡಿದ್ದರು. ಇದೀಗ 2ನೇ ಬಾರಿ ಶಂಕರ್ ಜೊತೆ 'ಇಂಡಿಯನ್ 2' ಚಿತ್ರದ ಮೂಲಕ ಚಿತ್ರತಂಡ ಸೇರಿಕೊಂಡಿದ್ದಾರೆ.

ಇಂಡಿಯನ್ ಸಿನಿಮಾ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ಈಗ ಹಲವು ವರ್ಷಗಳ ನಂತರ ಪಾರ್ಟ್ 2ಗೆ ಚಾಲನೆ ಸಿಕ್ಕಿದೆ. ಇದೇ ಜೂನ್‌ಗೆ ಸಿನಿಮಾ ರಿಲೀಸ್ ಆಗುತ್ತಿದೆ. ಕಮಲ್ ಹಾಸನ್, ಪ್ರಿಯಾ ಭವಾನಿ ಶಂಕರ್, ಕಾಜಲ್, ರಕುಲ್, ಸಿದ್ಧಾರ್ಥ್, ವಿವೇಕ್ ಸೇರಿದಂತೆ ಹಲವರು ನಟಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯಲ್ಲಿ ಕಂದಮ್ಮನಿದ್ದರೂ ದೀಪಿಕಾ ಪಡುಕೋಣೆ ಶೂಟಿಂಗ್ ಗೆ ಹಾಜರ್