ಹೈದರಾಬಾದ್: ರಿಲೇಶನ್‌ನಲ್ಲಿದ್ದ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಇಂದು ದಾಂಪತ್ಯ ಜೀವನಕ್ಕೆ ಗುಟ್ಟಾಗಿ ಕಾಲಿಟ್ಟರು ಎಂಬ ಸುದ್ದಿ ಹರಿದಾಡುತ್ತಿದೆ.
ಇಂದು ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರಂನಲ್ಲಿರುವ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ ಎಂಬ ಸುದ್ದಿಯಿದೆ.
ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ 2021 ರಲ್ಲಿ ಬಂದ 'ಮಹಾ ಸಮುದ್ರಂʼ ಸಿನಿಮಾದಲ್ಲಿ ಜೊತೆಯಾಗಿ ಸಿನಿಮಾ ಮಾಡಿದ್ದರು. ಆ ಬಳಿಕ ಅವರಿಬ್ಬರು ಆತ್ಮೀಯವಾಗಿ ನಾನಾ ಕಡೆ ಕಾಣಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದರು. ಇಬ್ಬರಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದಾರೆಂಬ ಸುದ್ದಿಯೂ ಇತ್ತು. ಆದರೆ ಎಲ್ಲೂ ಕೂಡ ಬಹಿರಂಗವಾಗಿ ಹೇಳಿರಲಿಲ್ಲ.