Select Your Language

Notifications

webdunia
webdunia
webdunia
webdunia

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮಲಯಾಳಂ ನಟ ಮೋಹನ್‌ಲಾಲ್

MohanLal

Sampriya

ಕುಂದಾಪುರ , ಬುಧವಾರ, 17 ಏಪ್ರಿಲ್ 2024 (18:49 IST)
photo Courtesy Instagram
ಕುಂದಾಪುರ: ಮಲಯಾಳಂನ ಖ್ಯಾತ ನಟ ಮೋಹನ್​ಲಾಲ್​ ಅವರು ಇಂದು ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.  

ನಟನ ಭೇಟಿ ಫೋಟೋಗಳನ್ನು ಸುಬ್ರಹ್ಮಣ್ಯ ಅಡಿಗ ಎನ್ನುವರರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವಿಯ ಸನ್ನಿಧಿಯಲ್ಲಿ ಕೆಲಕಾಲ ಧ್ಯಾನ ಮಾಡಿದರು. ದೇವಿಗೆ ಮುಂಜಾನೆ ನಡೆಯುವ ಮಹಾಮಂಗಳಾರತಿಯಲ್ಲಿ ನಟ ಪಾಲ್ಗೊಂಡು ಕೆಲೊ ಕಾಲ ದೇವಸ್ಥಾನದಲ್ಲಿ ಸಮಯ ಕಳೆದರು.

ಇನ್ನು ನಟ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಹಾಗೇ ಅವರ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.

ಸದ್ಯ ಮೋಹನ್‌ಲಾಲ್ ಅವರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುಬ ಬಾರೋಜ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

'ಇಂಡಿಯನ್ 2' ಸಿನಿಮಾದಲ್ಲಿ ಕಮಲ್ ಹಾಸನ್‌ ಮೊಮ್ಮಗನಾಗಿ ನಟ ಸಿದ್ದಾರ್ಥ್!