Select Your Language

Notifications

webdunia
webdunia
webdunia
webdunia

'ಉಲಾಜ್' ಸಿನಿಮಾದಲ್ಲಿ ಅಧಿಕಾರಿಯಾಗಿ ಜಾನ್ವಿ ಕಪೂರ್: ಜುಲೈ 5ರಂದು ತೆರೆಗೆ

Jahnvi Kapoor

Sampriya

ಮುಂಬೈ , ಬುಧವಾರ, 17 ಏಪ್ರಿಲ್ 2024 (19:47 IST)
Photo Courtesy X
ಮುಂಬೈ:  ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ನಟನೆಯ ಉಲಾಜ್ ಸಿನಿಮಾ ಜುಲೈ 5ರಂದು ತೆರೆಗೆ ಬರಲು ಸಿದ್ಧವಾಗಿದೆ.  ಜಂಗ್ಲೀ ಪಿಕ್ಚರ್ಸ್ ನಿರ್ಮಿಸಿರುವ ಉಲಾಜ್ ಚಿತ್ರದ ಬಹು ನಿರೀಕ್ಷಿತ ಟೀಸರ್ ಕೊನೆಗೂ ಬಂದಿದೆ.

ನಟಿ ಜಾಹ್ನವಿ ಕಪೂರ್ ಅವರು ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿ ಅಭಿನಯಿಸಿದ್ದಾರೆ.

ಮುಂಬರುವ ಚಿತ್ರ ಉಲಾಜ್, ಇದರಲ್ಲಿ ಗುಲ್ಶನ್ ದೇವಯ್ಯ ಮತ್ತು ರೋಷನ್ ಮ್ಯಾಥ್ಯೂ ಸಹ ನಟಿಸಿದ್ದಾರೆ.


ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಧಾಂಶು ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದು ದೇಶಭಕ್ತ ಕುಟುಂಬದಲ್ಲಿ ಜನಿಸಿದ ಮಹಿಳೆಯ ಐಎಫ್‌ಎಸ್ ಅಧಿಕಾರಿಯಾಗಿ ವಿದೇಶದಲ್ಲಿ ಕೆಲಸ ನಿರ್ವಹಿಸುವ ವೇಳೆ ಎದುರಾಗುವ ಸಮಸ್ಯೆಗಳು ಹಾಗೂ ಅದನ್ನು ಮೆಟ್ಟಿ ನಿಲ್ಲು ಧೈರ್ಯವಂತೆಯ ಕಥೆ.

ಚಿತ್ರದಲ್ಲಿ ಆದಿಲ್ ಹುಸೇನ್, ರಾಜೇಶ್ ತೈಲಾಂಗ್, ಮೇಯಾಂಗ್ ಚಾಂಗ್, ರಾಜೇಂದ್ರ ಗುಪ್ತಾ ಮತ್ತು ಜಿತೇಂದ್ರ ಜೋಶಿ ಕೂಡ ನಟಿಸಿದ್ದಾರೆ. ಪರ್ವೀಜ್ ಶೇಖ್ ಮತ್ತು ಸುಧಾಂಶು ಸರಿಯಾ ಬರೆದಿದ್ದು, ಅತಿಕಾ ಚೌಹಾನ್ ಸಂಭಾಷಣೆಗಳನ್ನು ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮಲಯಾಳಂ ನಟ ಮೋಹನ್‌ಲಾಲ್