Select Your Language

Notifications

webdunia
webdunia
webdunia
webdunia

ಕುಂದಾಪುರಕ್ಕೆ ಆಗಮಿಸಿದ 'ಕಲ್ಕಿ' ಕಾರು ಬುಜ್ಜಿ, ಓಡಿಸಿ ಖುಷಿ ಪಟ್ಟ ರಿಷಬ್ ಶೆಟ್ಟಿ

Bujji Car

Sampriya

ಬೆಂಗಳೂರು , ಸೋಮವಾರ, 24 ಜೂನ್ 2024 (20:07 IST)
Photo Courtesy X
ಬೆಂಗಳೂರು: ನಟ ಪ್ರಭಾಸ್ , ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ವೈಜ್ಞಾನಿಕ ಚಿತ್ರ ' ಕಲ್ಕಿ 2898 AD '  ಚಿತ್ರದ ಐಕಾನಿಕ್ ಕಾರ್ ಬುಜ್ಜಿ ಕುಂದಾಪುರಕ್ಕೆ ನಗರಕ್ಕೆ ಆಗಮಿಸಿದೆ.

ನಟ ರಿಷಬ್ ಶೆಟ್ಟಿ ಅವರು ಕಾಂತಾರ ಪ್ರೀಕ್ವೆಲ್ ಸಿನಿಮಾ ಶೂಟಿಂಗ್ ಬ್ಯುಸಿ ಹಿನ್ನೆಲೆ ಕುಂದಾಪುರದಲ್ಲೇ ನೆಲೆಸಿದ್ದಾರೆ. ಇದೀಗ ಕಲ್ಕಿ ಸಿನಿಮಾದ ಐಕಾನಿಕ್ ಕಾರನ್ನು ಕಾಂತಾರ ನಟ ಓಡಿಸಿದ್ದಾರೆ.

ಕಾರಿನ ಮುಂದೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಪೋಸ್ ನೀಡಿದ್ದಾರೆ. ಸದ್ಯ ಕಾರಿನ ಮುಂದೆ ರಿಷಬ್ ಶೆಟ್ಟಿಯಿರುವ ಫೋಟೋ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿದ ಕನ್ನಡದ ಪ್ರಭಾಸ್ ಅಭಿಮಾನಿಗಳಿಗೆ ಖುಷಿಯಾಗಿದ್ದಾರೆ. 'ಕಲ್ಕಿ 2898 AD'ಯಲ್ಲಿನ ನಟ ಪ್ರಭಾಸ್, ದೀಪಿಕಾ ಪಡುಕೋಣೆ, ಬಿಗ್‌ಬಿ, ಕಮಲ್ ಹಾಸನ್ ನಟನೆ ಜತೆಗೆ ಸಿನಿಮಾ ಪ್ರಿಯರು ಈ ವಾಹನವನ್ನು ದೊಡ್ಡ ಪರದೆಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಜೂನ್ 10 ರಂದು ಕಲ್ಕಿ 2898 AD' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಹೊಸ ಹವಾ ಸೃಷ್ಟಿಯಾಗಿದೆ.  ಬಹು ವಿಳಂಬದ ನಂತರ, ಚಿತ್ರವು ಅಂತಿಮವಾಗಿ ಜೂನ್ 27 ರಂದು ದೊಡ್ಡ ಪರದೆಯ ಮೇಲೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬಾರಿ ಕಾರು ಬಿಟ್ಟು ಮೆಟ್ರೋ ಏರಿದ ಈ ಸ್ಯಾಂಡಲ್ ವುಡ್ ಸ್ಟಾರ್ ಗುರುತಿಸಿ ನೋಡೋಣ