Select Your Language

Notifications

webdunia
webdunia
webdunia
Wednesday, 9 April 2025
webdunia

ದೇವರ ಸಿನಿಮಾಗೆ ಇದೆಂಥಾ ಅಪಶಕುನ: ಸುಟ್ಟು ಭಸ್ಮವಾಯಿತು ಜೂ.ಎನ್‌ಟಿಆರ್ ಬಿಗ್ ಕಟೌಟ್

Devara Cinema Film Review

Sampriya

ಹೈದರಾಬಾದ್ , ಶುಕ್ರವಾರ, 27 ಸೆಪ್ಟಂಬರ್ 2024 (15:38 IST)
Photo Courtesy X
ಹೈದರಾಬಾದ್: ಆರ್‌ಆರ್‌ಆರ್‌ ಬಳಿಕ ಜೂನಿಯರ್ ಎನ್‌ಟಿಆರ್ ಅಭಿನಯಿಸಿದ ದೇವರ ಸಿನಿಮಾ ಇಂದು ಭರ್ಜರಿ ಓಪನಿಂಗ್ಸ್‌ ಸಿಕ್ಕಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಇದೀಗ ಸಿನಿಮಾ ಬಿಡುಗಡೆ ಹಿನ್ನೆಲೆ ಹೈದರಾಬಾದ್ ನ ಸುದರ್ಶನ್ ಚಿತ್ರ ಮಂದಿರದಲ್ಲಿ ನಿರ್ಮಿಸಲಾಗಿದ್ದ ಜೂ.ಎನ್ ಟಿಆರ್ ಕಟೌಟ್ ಬೆಂಕಿಗಾಹುತಿಯಾಗಿದೆ.

ಹೈದರಾಬಾದ್‌ನ ಸುದರ್ಶನ್ 35 ಎಂಎಂ ಥಿಯೇಟರ್‌ನಲ್ಲಿ ದೇವರ ಚಿತ್ರ ಬಿಡುಗಡೆಯಾಗಿದ್ದು, ಚಿತ್ರಮಂದಿರದ ಮುಂದೆ ನೆರೆದಿದ್ದ ಸಾವಿರಾರು ಎನ್‌ಟಿಆರ್ ಅಭಿಮಾನಿಗಳು ಸಂಭ್ರಮಸಿದ್ದಾರೆ.

ಅಭಿಮಾನಿಗಳು ಪಟಾಗಿ ಸಿಡಿಸುವ ವೇಳೆ ಬೆಂಕಿಯ ಕಿಡಿ ಕಟೌಟ್ ಗೆ ತಗುಲಿದ್ದು, ಕ್ಷಣಮಾತ್ರದಲ್ಲಿ ಇಡೀ ಕಟೌಟ್ ಸುಟ್ಟು ಕರಕಲಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಆಗಬಹುದಾಗಿದ್ದ ದೊಡ್ಡ ಪ್ರಮಾದ ತಪ್ಪಿಸಿದ್ದಾರೆ.

ಸಿನಿಮಾಗೆ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರು ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ನೋಡಿದ ಮಂದಿ ಜೂನಿಯರ್ ಎನ್‌ಟಿಆರ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈಗಾಗಲೇ ಎಲ್ಲ ಚಿತ್ರಮಂದಿರಗಳಲ್ಲಿ ಸೋಲ್ಡೌಟ್ ಆಗಿವೆ. ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಚಿತ್ರದಲ್ಲಿ ಜೂ.ಎನ್‌ಟಿಆರ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಅಭಿನಯಿಸಿದ್ದಾರೆ. ಅದಲ್ಲದೆ ಬಾಲಿವುಡ್ ಹೀರೋ ಸೈಫ್ ಅಲಿ ಖಾನ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದು, ನಟರಾದ ಪ್ರಕಾಶ್ ರಾಜ್, ಶ್ರೀಕಾಂತ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಬಿಗ್ ಬಾಸ್ ನಲ್ಲಿ ಒಂದು ಅವಕಾಶ ಕೊಡಿ: ಅಂಗಲಾಚಿದ ಹುಚ್ಚ ವೆಂಕಟ್