Publish Date: Fri, 27 Sep 2024 (09:32 IST)
Updated Date: Fri, 27 Sep 2024 (09:36 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡಗೆ ಇಂದು ಮಹತ್ವದ ದಿನವಾಗಿದ್ದು ಜಾಮೀನು ಅರ್ಜಿ ಭವಿಷ್ಯ ಬಹಿರಂಗವಾಗಲಿದೆ.
ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮೂವರಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಹೀಗಾಗಿ ತಮಗೂ ಜಾಮೀನು ಸಿಗಬಹುದು ಎಂಬ ವಿಶ್ವಾಸದಲ್ಲಿ ಎ2 ಆರೋಪಿ ದರ್ಶನ್ ಇದ್ದಾರೆ.
ದರ್ಶನ್ ಇಂದು ಬಿಡುಗಡೆಯಾಗಲಿದ್ದಾರೆ ಎಂದೇ ನಂಬಿಕೆಯಲ್ಲಿರುವ ಅವರ ಅಭಿಮಾನಿಗಳು ತಮ್ಮ ಬಾಸ್ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು, ದರ್ಶನ್ ರನ್ನು ಕರೆತರಲು ಹೆಲಿಕಾಪ್ಟರ್ ಕೂಡಾ ಸಿದ್ಧವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅಷ್ಟು ಬೇಗ ಜಾಮೀನು ಸಿಗಬಹುದೇ ಎಂಬುದೇ ಪ್ರಶ್ನೆಯಾಗಿದೆ.
ಒಂದೇ ದಿನ ಇಂದು ದರ್ಶನ್ ಮತ್ತು ಪವಿತ್ರಾ ಜಾಮೀನು ಅರ್ಜಿ ತೀರ್ಮಾನವಾಗಲಿದೆ. ಆದರೆ ಈ ಕೇಸ್ ನಲ್ಲಿ ಇವರಿಬ್ಬರು ಪ್ರಮುಖ ಆರೋಪಿಗಳಾಗಿದ್ದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದಾಗಿದೆ. ಹಾಗಾಗಿ ಅಷ್ಟು ಸುಲಭವಾಗಿ ಜಾಮೀನು ಸಿಗದು. ಆದರೆ ಮೊನ್ನೆಯಷ್ಟೇ ವಕೀಲರ ಭೇಟಿ ಬಳಿಕ ದರ್ಶನ್ ಗೆಲುವಾಗಿರುವುದು ನೋಡಿದರೆ ಜಾಮೀನು ಸಿಗಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು. ಹೀಗಾಗಿ ಇಂದು ದರ್ಶನ್, ಪವಿತ್ರಾ ಪಾಲಿಗೆ ಶುಭ ಶುಕ್ರವಾರವಾಗುತ್ತಾ ಎಂದು ನೋಡಬೇಕಿದೆ.