Select Your Language

Notifications

webdunia
webdunia
webdunia
Tuesday, 8 April 2025
webdunia

ಲಾಯರ್ ಜೊತೆ ಮೀಟಿಂಗ್ ಬಳಿಕ ದರ್ಶನ್ ಮುಖದಲ್ಲಿ ನಗು: ಅಣ್ಣಂಗೆ ಬೇಲ್ ಫಿಕ್ಸ್

Darshan

Krishnaveni K

ಬಳ್ಳಾರಿ , ಬುಧವಾರ, 25 ಸೆಪ್ಟಂಬರ್ 2024 (14:40 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ಇಂದು ವಕೀಲರ ತಂಡ ಬಳ್ಳಾರಿ ಜೈಲಿನಲ್ಲಿ ಭೇಟಿ ಮಾಡಿದ್ದು, ಬಳಿಕ ಅವರ ಮುಖದಲ್ಲಿ ನಗು, ನಿರಾಳತೆ ಕಂಡುಬಂದಿದೆ.

ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ರನ್ನು ಇಂದು ವಕೀಲರ ತಂಡ ಭೇಟಿ ಮಾಡಿದೆ. ದರ್ಶನ್ ಪರ ಕೋರ್ಟ್ ನಲ್ಲಿ ವಾದ ಮಂಡಿಸುತ್ತಿರುವ ವಕೀಲರ ತಂಡ ಇಂದು ಸತತ ಎರಡನೇ ಬಾರಿಗೆ ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟಿತ್ತು. ಇಂದು ದರ್ಶನ್ ಜೊತೆ ಸುದೀರ್ಘ ಸಮಯ ಮಾತುಕತೆಯನ್ನೂ ನಡೆಸಿದೆ.

ಇದಾದ ಬಳಿಕ ತಮ್ಮ ಬ್ಯಾರಕ್ ಗೆ ತೆರಳುವಾಗ ಜೊತೆಗಿದ್ದ ಪೊಲೀಸ್ ಅಧಿಕಾರಿಯ ಜೊತೆ ನಗು ನಗುತ್ತಾ ಮಾತನಾಡುತ್ತಾ ಸಾಗಿದ ದರ್ಶನ್ ಮುಖದಲ್ಲಿ ನಿರಾಳತೆ ಕಾಣಿಸಿದೆ. ಜಾಮೀನು ಪಡೆಯುವ  ವಿಚಾರವಾಗಿ ವಕೀಲರು ದರ್ಶನ್ ಜೊತೆ ಮಾತುಕತೆ ನಡೆಸಿದ್ದು, ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ದರ್ಶನ್ ಕೂಡಾ ನಿರಾಳವಾಗಿದ್ದರು. ಇನ್ನು, ದರ್ಶನ್ ಸಂತೋಷದಿಂದ ತೆರಳುತ್ತಿರುವ ದೃಶ್ಯಗಳನ್ನು ನೋಡಿದ ಅವರ ಅಭಿಮಾನಿಗಳೂ ಅಣ್ಣಂಗೆ ಈ ಬಾರಿ ಬೇಲ್ ಫಿಕ್ಸ್ ಎಂದಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ಮೂವರಿಗೆ ಬೇಲ್ ಆಗಿದೆ. ಹೀಗಾಗಿ ತಮಗೂ ರಿಲೀಫ್ ಸಿಗಬಹುದು ಎಂಬ ವಿಶ್ವಾಸ ದರ್ಶನ್ ರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರುಣ್ ಸುಧೀರ್, ಸೋನಲ್ ಮೊಂಥೆರೋ ಹನಿಮೂನ್ ಸೀಕ್ರೆಟ್ ಬಯಲು ಮಾಡಿದ ಫೋಟೋ