Select Your Language

Notifications

webdunia
webdunia
webdunia
webdunia

ತರುಣ್ ಸುಧೀರ್, ಸೋನಲ್ ಮೊಂಥೆರೋ ಹನಿಮೂನ್ ಸೀಕ್ರೆಟ್ ಬಯಲು ಮಾಡಿದ ಫೋಟೋ

Tharun Sudhir-Sonal

Krishnaveni K

ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2024 (13:49 IST)
Photo Credit: Instagram
ಬೆಂಗಳೂರು: ನಟಿ ಸೋನಲ್ ಮೊಂಥೆರೋ ಪತಿ ತರುಣ್ ಸುಧೀರ್ ಜೊತೆ ವಿಮಾನ ಯಾನ ಮಾಡುತ್ತಿರುವ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಎಲ್ಲರೂ ಅವರು ಹನಿಮೂನ್ ಗೆ ತೆರಳಿದ್ದಾರೆ ಎಂದುಕೊಂಡಿದ್ದರು.

ಆದರೆ ಅವರ ಹನಿಮೂನ್ ಸೀಕ್ರೆಟ್ ಈಗ ಬಯಲಾಗಿದೆ. ಇಂದು ಸೋನಲ್ ಮತ್ತೊಂದು ಫೋಟೋ ಪ್ರಕಟಿಸಿದ್ದು, ಇಬ್ಬರೂ ಹೋಗಿದ್ದು ಹನಿಮೂನ್ ಗೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ದುಬೈಗೆ ಹೋಗಿರುವ ಫೋಟೋ ಹಂಚಿಕೊಂಡಿರುವ ಸೋನಲ್ ಅದರ ಹಿಂದಿನ ಕಾರಣವನ್ನೂ ರಿವೀಲ್ ಮಾಡಿದ್ದಾರೆ.

ಅಷ್ಟಕ್ಕೂ ಸೋನಲ್ ಮತ್ತು ತರುಣ್ ಜೊತೆಯಾಗಿ ಹೋಗಿದ್ದು ದುಬೈಗೆ. ಅದೂ ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ, ಆರಾಧನಾ ಸೇರಿದಂತೆ ಕುಟುಂಬದವರೂ ಜೊತೆಯಾಗಿದ್ದಾರೆ. ಇವರೆಲ್ಲಾ ದುಬೈನಲ್ಲಿ ನಡೆಯಲಿರುವ ಐಐಎಫ್ಎ ಉತ್ಸವ 2024 ರಲ್ಲಿ ಭಾಗಿಯಾಗಲು ತೆರಳಿದ್ದಾರೆ.

ತರುಣ್-ಸೋನಲ್ ಮಾಲ್ಡೀವ್ಸ್ ಗೆ ಹನಿಮೂನ್ ಗೆ ಹೋಗಲು ಪ್ಲ್ಯಾನ್ ಮಾಡಿರುವುದಾಗಿ ಆಂಕರ್ ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನಿನ್ನೆ ಇಬ್ಬರೂ ಜೊತೆಯಾಗಿ ವಿದೇಶ ಪ್ರಯಾಣ ಮಾಡಿರುವುದನ್ನು ನೋಡಿ ಎಲ್ಲರೂ ಹನಿಮೂನ್ ಗೆ ಹೋಗಿರಬಹುದು ಎಂದುಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಯುವ ದಸರಾದಲ್ಲಿ ಡಿ ಬಾಸ್ ಹೆಸರು ಕೂಗಿದ್ದಕ್ಕೆ ಶ್ರೀಮುರಳಿ ಏನು ಹೇಳಿದ್ರು ನೋಡಿ