ಮಂಗಳೂರು: ಸೋನಲ್ ಮೊಂಥೆರೋ ಮತ್ತು ತರುಣ್ ಸುಧೀರ್ ಮಂಗಳೂರಿನಲ್ಲಿ ನಿನ್ನೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಅವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿರ್ದೇಶಕ ತರುಣ್ ಮತ್ತು ನಟಿ ಸೋನಲ್ ಮೊದಲು ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಆದರೆ ಸೋನಲ್ ಮೂಲತಃ ಕ್ರಿಶ್ಚಿಯನ್ನರಾಗಿದ್ದು ಅವರ ಸಂಪ್ರದಾಯದಂತೆ ಮಂಗಳೂರಿನ ಚರ್ಚ್ ನಲ್ಲಿ ಮತ್ತೊಮ್ಮೆ ಮದುವೆಯಾಗಿದ್ದಾರೆ.
ಈ ಮದುವೆಗೆ ತರುಣ್ ಮತ್ತು ಸೋನಲ್ ಆಪ್ತರು ಭಾಗಿಯಾಗಿದ್ದರು. ಚಿತ್ರರಂಗದಿಂದ ನಟ ನೆನಪಿರಲಿ ಪ್ರೇಮ್, ಶರಣ್ ಕುಟುಂಬದವರು ಭಾಗಿಯಾಗಿದ್ದರು. ಅದರ ಹೊರತಾಗಿ ಸೋನಲ್ ನೆಂಟರಿಷ್ಟರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಮದುವೆಗಾಗಿ ತರುಣ್ ತಮ್ಮ ಹೇರ್ ಸ್ಟೈಲ್ ನ್ನೇ ಬದಲಾಯಿಸಿಕೊಂಡಿದ್ದಾರೆ.
ಇಷ್ಟು ದಿನ ಉದ್ದ ಕೂದಲು ಬಿಟ್ಟುಕೊಂಡಿದ್ದ ತರುಣ್ ಈಗ ಕೂದಲು ಟ್ರಿಮ್ ಮಾಡಿಸಿಕೊಂಡಿದ್ದು ಮತ್ತಷ್ಟು ಯಂಗ್ ಆಂಡ್ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಸೋನಲ್ ಸಾಂಪ್ರದಾಯಿಕ ಬಿಳಿ ಗೌನ್ ಮತ್ತು ತರುಣ್ ಕಪ್ಪು ಬಿಳುಪು ಸೂಟ್ ತೊಟ್ಟುಕೊಂಡಿದ್ದಾರೆ. ಚರ್ಚ್ ನಲ್ಲಿ ಧರ್ಮಗುರುವಿನ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡು ಮತ್ತೊಮ್ಮೆ ಸತಿ-ಪತಿಗಳಾದರು.