Select Your Language

Notifications

webdunia
webdunia
webdunia
webdunia

ಸೋನಲ್ ಮೊಂಥೆರೋ, ತರುಣ್ ಸುಧೀರ್ ಗೆ ಮದುವೆ ಆದ ಮೇಲೆ ಎಲ್ಲಾ ಆಯ್ತಾ ಎಂದು ಕೇಳಿದ ಅನುಶ್ರೀ

Tharun Sudhir-Sonal Monterio

Krishnaveni K

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (12:23 IST)
ಬೆಂಗಳೂರು: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಜೋಡಿಯನ್ನು ಇದೇ ಮೊದಲ ಬಾರಿಗೆ ಆಂಕರ್ ಅನುಶ್ರೀ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನ ಮಾಡಿದ್ದಾರೆ. ಈ  ವೇಳೆ ಸಾಕಷ್ಟು ತಮಾಷೆಗಳು ನಡೆದಿವೆ.

ಹೊಸದಾಗಿ ಮದುವೆಯಾದ ಜೋಡಿ, ಮಾತಿನ ಮಲ್ಲಿ ಅನುಶ್ರೀ ಕೈಗೆ ಸಿಕ್ಕರೆ ಕೇಳಬೇಕಾ? ಶೋ ಪೂರ್ತಿ ಇಬ್ಬರನ್ನೂ ಅನುಶ್ರೀ ಚೆನ್ನಾಗಿಯೇ ಗೋಳಾಡಿಸಿದ್ದಾರೆ. ಸಾಕಷ್ಟು ತಮಾಷೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರಿಗೆ ತರುಣ್ ಗೆಳೆಯ ನಟ ಪ್ರೇಮ್ ಕೂಡಾ ಸಾಥ್ ನೀಡಿದ್ದಾರೆ.

ಈ ಸಂದರ್ಶನದ ಪ್ರೋಮೋವನ್ನು ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೂರ್ತಿ ವಿಡಿಯೋ ಸದ್ಯದಲ್ಲೇ ಬರಲಿದೆ ಎಂದಿದ್ದಾರೆ. ಈ ಪ್ರೋಮೋದಲ್ಲಿ ಅನುಶ್ರೀ ಮದುವೆಯಾದ ಮೇಲೆ ನಡೆಯಬೇಕಾದ ಎಲ್ಲಾ ಶಾಸ್ತ್ರಗಳೂ ಆಯ್ತಾ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಇಬ್ಬರೂ ಜೋರಾಗಿ ನಗುತ್ತಾರೆ.

ಈ ಪ್ರೋಮೋದಲ್ಲಿ ಪ್ರೇಮ್ ಜೊತೆಗೆ ನಿಶ್ವಿಕಾ ನಾಯ್ಡು ಕೂಡಾ ವಿಡಿಯೋ ಕಾಲ್ ಮುಖಾಂತರ ಕಾಣಿಸಿಕೊಂಡು ಹನಿಮೂನ್ ಗೆ ಯಾವಾಗ ಹೋಗ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಬಜೆಟ್, ಕ್ಲೈಮೇಟ್ ಎಲ್ಲಾ ನೋಡ್ಬೇಕು ಅಂತಾರೆ. ಇನ್ನು, ಈ ಪ್ರೋಮೋ ನೋಡಿ ನೆಟ್ಟಿಗರೂ ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದು, ಎಲ್ಲಾ ಆಯ್ತಾ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ರಾಜಾತಿಥ್ಯಕ್ಕೆ ನಟ ದರ್ಶನ್ ಗೆ ಇನ್ನು ಪೊಲೀಸರಿಂದ ಆತಿಥ್ಯ