Select Your Language

Notifications

webdunia
webdunia
webdunia
webdunia

ತರುಣ್ ಸುಧೀರ್, ಸೋನಲ್ ಮದುವೆಗೆ ಧರ್ಮ ಅಡ್ಡಬರುತ್ತಾ, ಯಾವ ಥರಾ ನಡೆಯಲಿದೆ ಮದುವೆ

Tharun Sudhir-Sonal

Krishnaveni K

ಬೆಂಗಳೂರು , ಶುಕ್ರವಾರ, 2 ಆಗಸ್ಟ್ 2024 (09:06 IST)
ಬೆಂಗಳೂರು: ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ಇದೇ ತಿಂಗಳು 11 ರಂದು ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದನ್ನು ಒಂದು ಟೀಸರ್ ಮೂಲಕ ಇಬ್ಬರೂ ಪ್ರಕಟಿಸಿದ್ದಾರೆ.

ರಾಬರ್ಟ್ ಸಿನಿಮಾದಲ್ಲಿ ತರುಣ್ ನಿರ್ದೇಶಕನಾಗಿದ್ದರೆ ಸೋನಲ್ ನಟಿಯಾಗಿದ್ದರು. ಈ ಸಿನಿಮಾದಿಂದ ಇವರಿಬ್ಬರ ಪ್ರೀತಿ ಹುಟ್ಟಿತು ಎನ್ನಲಾಗುತ್ತಿದೆ. ಈ ಪ್ರೀತಿಗೆ ಸೇತುವೆಯಾಗಿದ್ದು ನಟ ದರ್ಶನ್ ಎಂಬ ಮಾತೂ ಕೇಳಿಬರುತ್ತಿದೆ. ಇದೆಲ್ಲದರ ನಡುವೆ ತಮ್ಮಿಬ್ಬರ ಪ್ರೀತಿಗೆ ಈಗ ಈ ಜೋಡಿ ಮದುವೆಯ ಮುದ್ರೆಯೊತ್ತುತ್ತಿದ್ದಾರೆ.

ತರುಣ್ ಹಿಂದೂ ಧರ್ಮೀಯರಾಗಿದ್ದರೆ, ಸೋನಲ್ ಮೂಲತಃ ಕ್ರಿಶ್ಚಿಯನ್ ಧರ್ಮೀಯರು. ಇವರಿಬ್ಬರ ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆ ಈಗ ಎಲ್ಲೆಡೆ ವೈರಲ್ ಆಗಿದೆ. ಆದರೆ ಈ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಯಾವ ಧರ್ಮದ ಕುರುಹೂ ಇಲ್ಲ. ಒಂದು ಸರಳ ಒಕ್ಕಣೆಯೊಂದಿಗೆ ವಿವಾಹ ಆಮಂತ್ರಣ ಪತ್ರಿಕೆ ಮಾಡಿಸಲಾಗಿದೆ.

ಆದರೆ ಮದುವೆ ಎಂದ ಮೇಲೆ ಶಾಸ್ತ್ರಗಳು ಇರಲೇಬೇಕಲ್ವಾ? ಇವರಿಬ್ಬರ ಮದುವೆ ಯಾವ ರೀತಿ ನಡೆಯಲಿದೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ತರುಣ್ ಮತ್ತು ಸೋನಲ್ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರಂತೆ. ಮೊದಲು ಹಿಂದೂ ಧರ್ಮದಂತೆ ಸಪ್ತಪದಿ ತುಳಿಯಲಿರುವ ಜೋಡಿ ಬಳಿಕ ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಲಿದ್ದಾರಂತೆ. ಈ ಮೂಲಕ ಎರಡೂ ಧರ್ಮದ ಸಂಪ್ರದಾಯವನ್ನೂ ಪಾಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲೋ ಟ್ರಿಪ್ ಮುಗಿಸಿ ಬಂದ ಐಶ್ವರ್ಯಾ ರೈಗೆ ಎದುರಾಯ್ತು ಮತ್ತದೇ ಪ್ರಶ್ನೆ