Select Your Language

Notifications

webdunia
webdunia
webdunia
webdunia

ಸೋಲೋ ಟ್ರಿಪ್ ಮುಗಿಸಿ ಬಂದ ಐಶ್ವರ್ಯಾ ರೈಗೆ ಎದುರಾಯ್ತು ಮತ್ತದೇ ಪ್ರಶ್ನೆ

Abhishek Aishwarya Rai Divorce Rumours

Sampriya

ಮುಂಬೈ , ಗುರುವಾರ, 1 ಆಗಸ್ಟ್ 2024 (19:06 IST)
Photo Courtesy X
ಪತಿ ಅಭಿಷೇಕ್ ಬಚ್ಚನ್ ಅವರೊಂದಿಗಿನ ದಾಂಪತ್ಯ ಬಿರುಕಿನ ವದಂತಿಗಳ ಮಧ್ಯೆಯೇ ನಟಿ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ನ್ಯೂಯಾರ್ಕ್‌ನಲ್ಲಿ ವೆಕೇಷನ್ ಮುಗಿಸಿ ಮುಂಬೈಗೆ ವಾಪಾಸ್ಸಾಗಿದ್ದಾರೆ.

ಗುರುವಾರ ಮುಂಜಾನೆ ಮುಂಬೈ ನಟಿ ತನ್ನ ಮಗಳೊಂದಿಗೆ ನಗರಕ್ಕೆ ಬಂದಿಳಿದ ವಿಡಿಯೋವನ್ನು ಮುಂಬೈ ಮೂಲದ ಛಾಯಾಗ್ರಾಹಕರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ಪಾಪರಾಜಿಗಳಿಂದ ಸ್ವಾಗತಿಸಲ್ಪಟ್ಟ ತಾಯಿ-ಮಗಳು ತಮ್ಮ ವಾಹನದತ್ತ ಸಾಗುತ್ತಿರುವಾಗ ಕ್ಯಾಮರಾಗಳಿಗೆ ಮುಗುಳ್ನಕ್ಕರು.

ಈಚೆಗೆ ಬಾಲಿವುಡ್‌ ಅಂಗಳದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ನಡುವಿನ ದಾಂಪತ್ಯದ ಬಿರುಕಿನ ಬಗ್ಗೆ ವದಂತಿ ಜೋರಾಗಿ ಹರಿದಾಡುತ್ತಿದೆ. ಈ ಜೋಡಿ ಮಧ್ಯೆ ಎಲ್ಲವೂ ಸರಿಯಿಲ್ಲ, ಇವರಿಬ್ಬರು ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ. ಈ ವಿಚಾರ ಹೆಚ್ಚು ಮುನ್ನೆಲೆಗೆ ಬಂದಿದ್ದು ಜುಲೈ 12 ರಂದು ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಅಭಿಷೇಕ್ ತನ್ನ ಪೋಷಕರ ಜತೆ ಫೋಟೋಗೆ ಪೋಸ್ ನೀಡಿದರೆ, ಐಶ್ವರ್ಯಾ ತನ್ನ ಮಗಳ ಜತೆ ಫೋಟೋ ತೆಗೆಸಿಕೊಂಡಿದ್ದಾರೆ.

ಈ ಈವೆಂಟ್‌ಗೆ ಅಭಿಷೇಕ್ ಅವರು ತಂದೆ ಅಮಿತಾಭ್ ಮತ್ತು ತಾಯಿ ಜಯಾ ಬಚ್ಚನ್ ಮತ್ತು ಅವರ ಸಹೋದರಿ ಶ್ವೇತಾ ಬಚ್ಚನ್ ಅವರ ಕುಟುಂಬದೊಂದಿಗೆ ಈವೆಂಟ್‌ನಲ್ಲಿ ಭಾಗವಹಿಸಿದ್ದರು, ಆದರೆ ಐಶ್ವರ್ಯಾ ಆರಾಧ್ಯ ಅವರೊಂದಿಗೆ ಪ್ರತ್ಯೇಕವಾಗಿ ಆಗಮಿಸಿದರು.

ಜುಲೈ 13 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಶುಭ ಆಶೀರ್ವಾದ ಸಮಾರಂಭದಲ್ಲಿ ಐಶ್ವರ್ಯಾ ಏಕಾಂಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಐಶ್ವರ್ಯ ಅಥವಾ ಅಭಿಷೇಕ್ ಊಹಾಪೋಹಗಳಿಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಕಾಮೆಂಟ್‌ಗಳನ್ನು ಮಾಡಿಲ್ಲ

Share this Story:

Follow Webdunia kannada

ಮುಂದಿನ ಸುದ್ದಿ

ತರುಣ್ ಸುಧೀರ್ ಮದುವೆಗೆ ದರ್ಶನ್ ಕೊಟ್ಟ ಭರವಸೆ ಹುಸಿಯಾಯಿತು