Select Your Language

Notifications

webdunia
webdunia
webdunia
webdunia

ಮದುವೆಗೆ ಬನ್ನಿ ಅಣ್ಣಾ.. ಜೈಲಿನಲ್ಲಿರುವ ದರ್ಶನ್ ಗೆ ಮದುವೆ ಆಮಂತ್ರಣ ಕೊಟ್ಟ ತರುಣ್ ಸುಧೀರ್

Tharun Sudhir

Krishnaveni K

ಬೆಂಗಳೂರು , ಶುಕ್ರವಾರ, 19 ಜುಲೈ 2024 (13:33 IST)
Photo Credit: Facebook
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ರನ್ನು ಇಂದು ಕಾಟೇರ ನಿರ್ದೇಶಕ ತರುಣ್ ಸುಧೀರ್ ಭೇಟಿಯಾಗಿದ್ದಾರೆ. ಈ ವೇಳೆ ತಮ್ಮ ಮದುವೆಗೆ ಆಮಂತ್ರಣ ನೀಡಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೊನಾಲ್ ಮೊಂಥಾರಿಯೊ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳಿವೆ. ಮುಂದಿನ ತಿಂಗಳು ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿಯಿದೆ. ಇದನ್ನು ಇನ್ನೂ ತರುಣ್ ಖಚಿತವಾಗಿ ಹೇಳಿಲ್ಲ. ಆದರೆ ಸೊನಾಲ್ ಜೊತೆ ಮದುವೆಯಾಗುವ ಬಗ್ಗೆ ಕೇಳಿದಾಗ ಆಷಾಢ ಮುಗಿದ ಮೇಲೆ ಮಾತುಕತೆ ನಡೆಸುವುದಾಗಿ ತರುಣ್ ತಾಯಿ ಹೇಳಿದ್ದರು.

ಇವರಿಬ್ಬರ ಸಂಬಂಧಕ್ಕೆ ಸೇತುವೆಯಾಗಿದ್ದೇ ನಟ ದರ್ಶನ್ ಎನ್ನಲಾಗಿದೆ. ರಾಬರ್ಟ್ ಸಿನಿಮಾದಲ್ಲಿ ಈ ಮೂವರೂ ಒಟ್ಟಿಗೇ ಕೆಲಸ ಮಾಡಿದ್ದಾರೆ. ಆಗಿನಿಂದಲೇ ದರ್ಶನ್ ಇವರಿಬ್ಬರನ್ನೂ ಕಿಚಾಯಿಸುತ್ತಲೇ ಇದ್ದರು. ಇದರಿಂದಲೇ ಇಬ್ಬರ ನಡುವೆ ಪ್ರೀತಿ ಅರಳಿದೆ ಎನ್ನಲಾಗುತ್ತಿದೆ. ಇದಲ್ಲದೆ ದರ್ಶನ್ ರನ್ನು ತರುಣ್ ಅಣ್ಣನ ರೀತಿ ನೋಡುತ್ತಾರೆ.

ಹೀಗಾಗಿ ಈಗ ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ದರ್ಶನ್ ಗೇ ನೀಡಬೇಕು, ಮದುವೆ ಬಗ್ಗೆ ಅವರೊಂದಿಗೆ ಮಾತನಾಡಬೇಕು ಎಂದು ತರುಣ್ ಜೈಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ ಈ ವೇಳೆ ತರುಣ್ ಮಾಧ್ಯಮಗಳ ಕೈಗೆ ಸಿಗಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ಅಂಬಾನಿ ಮದುವೆಯಲ್ಲಿ ಊಟ ಮಾಡಿ ಇದೇನಾಗಿ ಹೋಯ್ತು ಜಾನ್ವಿ ಕಪೂರ್ ಗೆ