Select Your Language

Notifications

webdunia
webdunia
webdunia
webdunia

ಜೈಲೂಟಕ್ಕೆ ಏನು ಕೊರತೆಯಾಗಿದೆ ಅಂತ ಮನೆ ಊಟ ಕೇಳ್ತಿದ್ದೀರಿ: ನಟ ದರ್ಶನ್ ಗೆ ಪ್ರಶ್ನೆ

Darshan Thoogudeepa

Krishnaveni K

ಬೆಂಗಳೂರು , ಶುಕ್ರವಾರ, 19 ಜುಲೈ 2024 (10:38 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಯುತ್ತಿದ್ದು, ಇಂದು ಕೋರ್ಟ್ ತೀರ್ಪು ನೀಡುವ ಸಾಧ್ಯತೆಯಿದೆ.

ಆದರೆ ಮನೆ ಊಟಕ್ಕೆ ಅರ್ಜಿ ಸಲ್ಲಿಸಿರುವ ದರ್ಶನ್ ಗೆ ಸರ್ಕಾರಿ ವಕೀಲರು ಮನೆ ಊಟ ನೀಡಬಾರದು ಎಂದು ವಾದಿಸಿದ್ದಾರೆ. ಜೈಲಿನಲ್ಲಿ ಸಿಗುತ್ತಿರುವ ಊಟದಲ್ಲಿ ಪೌಷ್ಠಿಕದ ಕೊರತೆಯಿಲ್ಲ. ಹೀಗಿರುವಾಗ ಮನೆ ಊಟಕ್ಕೆ ಮನವಿ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ತೀರ್ಪು ಇಂದು ಮಧ್ಯಾಹ್ನ ಬರಲಿದೆ.

ದರ್ಶನ್ ತಮಗೆ ಜೈಲೂಟದಿಂದ ಅಜೀರ್ಣವಾಗುತ್ತಿದೆ ಮನೆ ಊಟ ಕೊಡಿ, ಜೈಲಿನಲ್ಲಿ ನೀಡಲಾಗಿರುವ ಚಾಪೆಯಲ್ಲಿ ನಿದ್ರೆ ಬರುತ್ತಿಲ್ಲ, ಹಾಸಿಗೆ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರೀ ವಕೀಲರಿಂದ ಆಕ್ಷೇಪ ವ್ಯಕ್ತವಾಗಿದೆ. ಕೊಲೆ ಪ್ರಕರಣದಲ್ಲಿ ವಿಚಾರಾಧೀನ ಕೈದಿಯಾಗಿರುವ ಆರೋಪಿಗೆ ಈ ಎಲ್ಲಾ ಸೌಲಭ್ಯಗಳನ್ನು ನೀಡಬಾರದು.

ವಿಚಾರಾಣಾಧೀನ ಕೈದಿಗಳು ಪರಾರಿಯಾಗುವ ಅಥವಾ ಆತ್ಮಹತ್ಯೆಗೆ ಯತ್ನಿಸುವ ಅಪಾಯವಿದೆ. ಇದೇ ಕಾರಣಕ್ಕೆ ಬಂಧೀಖಾನೆ ನಿಯಮದ ಪ್ರಕಾರ ಸ್ಪೂನ್, ಲೋಟ, ತಟ್ಟೆ ಮುಂತಾದ ವಸ್ತುಗಳನ್ನು ನೀಡಲು ಸಾಧ್ಯವಿಲ್ಲ. ಕೊಲೆ ಪ್ರಕರಣದಲ್ಲಿ ಈ ರೀತಿಯ ವಸ್ತುಗಳನ್ನು ನೀಡುವ ಮೊದಲು ಎಸ್ಪಿ ಅಥವಾ ಐಜಿಪಿ ಅಧಿಕಾರಿಗಳ ಅನುಮತಿ ಪಡೆಯಬೇಕು. ಆದರೆ ಈ ಪ್ರಕರಣದಲ್ಲಿ ಆರೋಪಿ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿರುವುದು ಸರಿಯಾದ ಕ್ರಮವಲ್ಲ ಎಂದು ವಾದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಿಂದ ಹೊರಬಂದ ಮೇಲೆ ದರ್ಶನ್ ಹೀಗಿರಲ್ಲ: ಅದಕ್ಕೆ ಕಾರಣ ಮಗ ವಿನೀಶ್ ಬುದ್ಧಿವಾದ