Publish Date: Sun, 14 Jul 2024 (14:59 IST)
Updated Date: Sun, 14 Jul 2024 (15:01 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಆರೋಗ್ಯದಲ್ಲೂ ಏರುಪೇರಾಗಿದ್ದು ಜೈಲಿನಲ್ಲೇ ಚಿಕಿತ್ಸೆ ಕೊಡಿಸಲಾಗಿದೆ.
ಇತ್ತೀಚೆಗೆ ಜೈಲೂಟ ಸೇವಿಸಿ ನಟ ದರ್ಶನ್ ಅಸ್ವಸ್ಥರಾಗಿದ್ದರು. ಬಳಿಕ ಜೈಲಿನ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಮನೆ ಊಟಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು ಜುಲೈ 18 ರಂದು ಹೈಕೋರ್ಟ್ ಈ ಬಗ್ಗೆ ತೀರ್ಪು ನೀಡುವವ ಸಾಧ್ಯತೆಯಿದೆ.
ಪವಿತ್ರಾ ಗೌಡಗೂ ಜೈಲೂಟ ಸೇವಿಸಿ ಆರೋಗ್ಯ ಸಮಸ್ಯೆಯಾಗಿದೆ ಎನ್ನಲಾಗಿದೆ. ಜೈಲಿನ ಆಹಾರ ಸೇವನೆಯಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೆಚ್ಚು ಹಣ್ಣು ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಜನರಲ್ ವಾರ್ಡ್ ನಲ್ಲಿ ಚೆಕಪ್ ಮಾಡಲಾಗಿದೆ.
ಇದಕ್ಕೆ ಮೊದಲು ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ಪವಿತ್ರಾ ಗೌಡಗೆ ಒಮ್ಮೆ ಲೋ ಬಿಪಿ ಆಗಿತ್ತು. ಬಳಿಕ ಚಿಕಿತ್ಸೆ ನೀಡಿದ ಬಳಿಕ ಸುಧಾರಿಸಿಕೊಂಡಿದ್ದಾರೆ. ಸದಾ ಐಷಾರಾಮಿ ಜೀವನದಲ್ಲೇ ಕಾಲ ಕಳೆಯುತ್ತಿದ್ದವರಿಗೆ ಈಗ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ.