Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ತಲೆ ಬೋಳಿಸಿಕೊಂಡ ದರ್ಶನ್, ಅದಕ್ಕೂ ಇದೆ ಕಾರಣ

Darshan
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಈಗ ತಮ್ಮ ಕೂದಲುಗಳಿಗೆ ಸಂಪೂರ್ಣವಾಗಿ ಕತ್ತರಿ ಹಾಕಿಕೊಂಡಿದ್ದಾರಂತೆ. ಇದಕ್ಕೆ ಕಾರಣವೂ ಇದೆ.

ನಟ ದರ್ಶನ್ ತಮ್ಮ ಕೂದಲುಗಳಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ. ದರ್ಶನ್ ಈ ಮೊದಲೇ ವಿಗ್ ಬಳಸಿಕೊಳ್ಳುತ್ತಿದ್ದರು. ಆದರೆ ಈಗ ಜೈಲಿನಲ್ಲಿ ಸಹಜ ಕೂದಲು ಮತ್ತು ವಿಗ್ ಕೂದಲಗಳ ಸಂರಕ್ಷಣೆ ಕಷ್ಟವಾಗುತ್ತಿದೆ. ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ.
  
ಆದರೆ ಸದ್ಯಕ್ಕೆ ಇದಕ್ಕೆಲ್ಲಾ ಅನುಮತಿ ಸಿಗಲ್ಲ. ಹೀಗಾಗಿ ಇದರ ತಲೆನೋವೇ ಬೇಡವೆಂದು ದರ್ಶನ್ ತಮ್ಮ ಕೂದಲುಗಳಿಗೆ ಕತ್ತರಿ ಹಾಕಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈಗಾಗಲೇ ದರ್ಶನ್ ಜೈಲಿನಲ್ಲಿ ತಮ್ಮ ದೈನಂದಿನ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದಾರೆ.

ಹೀಗಾಗಿ ಮೈಕಟ್ಟು ಕಾಯ್ದುಕೊಳ್ಳಲು ಯೋಗದ ಮೊರೆ ಹೋಗಿದ್ದಾರೆ ಎಂಬ ಮಾಹಿತಿಯಿದೆ. ಇದರ ಜೊತೆಗೆ ಸಮಯ ಕಳೆಯಲು ಪುಸ್ತಕಗಳನ್ನು ಗ್ರಂಥಾಲಯದಿಂದ ಪಡೆದು ಓದುತ್ತಿದ್ದಾರೆ ಎನ್ನಲಾಗಿದೆ. ಸದಾ ಐಷಾರಾಮಿ ಜೀವನ ಶೈಲಿ ನಡೆಸುತ್ತಿದ್ದ ದರ್ಶನ್ ಗೆ ಈಗ ಜೈಲಿನ ವಾತಾವರಣಕ್ಕೆ ಹೊಂದುವುದೇ ಕಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ವರ್ಕೌಟ್ ಇಲ್ಲ, ದೇಹ ದಂಡಿಸಲು ಹೊಸ ಉಪಾಯ ಕಂಡುಕೊಂಡ ದರ್ಶನ್