Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಹತ್ಯೆ ನಡೆದ ತಿಂಗಳ ಬಳಿಕ ದರ್ಶನ್ ಮನೆ ಕೆಲಸದವರ ಹೇಳಿಕೆ ಪಡೆದ ಖಾಕಿ

ರೇಣುಕಾಸ್ವಾಮಿ ಹತ್ಯೆ ನಡೆದ ತಿಂಗಳ ಬಳಿಕ ದರ್ಶನ್ ಮನೆ ಕೆಲಸದವರ ಹೇಳಿಕೆ ಪಡೆದ ಖಾಕಿ

Sampriya

ಬೆಂಗಳೂರು , ಗುರುವಾರ, 11 ಜುಲೈ 2024 (15:54 IST)
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಇಂದಿಗೆ ಒಂದು ತಿಂಗಳಾದ ಬಳಿಕ ಇದೀಗ ದರ್ಶನ್ ಅವರ ಮನೆಯವರ ವಿಚಾರಣೆಯನ್ನು ಕಾಮಾಕ್ಷಿ ಪೊಲೀಸರು ನಡೆಸಿದ್ದಾರೆ.

ದರ್ಶನ್ ಮನೆ ಕೆಲಸಗಾರರ ವಿಚಾರಣೆ ನಡೆಸಿದ್ದಾರೆ. ಬಾಬುಲ್ ಖಾನ್, ಸುಶೀಲಮ್ಮ, ಹಾಗೂ ಅಮೀರ್ ಖಾನ್ ಅವರನ್ನು ವಿಚಾರಣಂಣೆ  ನಡೆಸಿ ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ದರ್ಶನ್ ಅವರ ಕೊಲೆ ನಡೆದ ದಿನ ಯಾವ ಬಟ್ಟೆಯನ್ನು ಧರಿಸಿದ್ದರು, ಒಟ್ಟು ಅಂದಿನ ದರ್ಶನ್ ನಡವಳಿಕೆಯ ಬಗ್ಗೆ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆಂಬ ಮಾಹಿತಿಯಿದೆ.

ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ ಒಂದು ತಿಂಗಳಾಗಿದ್ದು, ಪ್ರಕರಣ ಸಂಬಂಧ ಹಲವಾರ ಸಾಕ್ಷ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಪ್ರಕರಣದ ಎ1 ಆರೋಪಿ ಪವಿತ್ರಾ, ಎ2 ಆರೋಪಿ ದರ್ಶನ್ ಸೇರಿದಂತೆ 16 ಮಂದಿಯನ್ನು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲೂಟ ಸೇರ್ತಿಲ್ಲ ಎಂದ ದರ್ಶನ್ ಗೆ ಬಂತು ಕೆಜಿಗಟ್ಟಲೆ ಹಣ್ಣುಗಳು