Select Your Language

Notifications

webdunia
webdunia
webdunia
webdunia

Anchor Anushree: ಕೊನೆಗೂ ಪ್ರೀತಿ ಕತೆ ಹೇಳಲು ಮುಂದಾದ ಆಂಕರ್ ಅನುಶ್ರೀ: ವೀಕ್ಷಕರ ಬಹುದಿನದ ಪ್ರಶ್ನೆಗೆ ಸಿಕ್ತು ಉತ್ತರ

Anchor Anushree

Krishnaveni K

ಬೆಂಗಳೂರು , ಶನಿವಾರ, 24 ಆಗಸ್ಟ್ 2024 (09:56 IST)
ಬೆಂಗಳೂರು: ಆಂಕರ್ ಅನುಶ್ರೀ ಸೋಷಿಯಲ್ ಮೀಡಿಯಾ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರೀತಿ ಕತೆ ಹೇಳಲು ಬರುತ್ತಿರುವುದಾಗಿ ಪ್ರೋಮೋ ಹಂಚಿಕೊಂಡಿದ್ದಾರೆ. ಈ ಪ್ರೋಮೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಆಂಕರ್ ಅನುಶ್ರೀ ಎಲ್ಲೇ ಹೋದರೂ ಅವರಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಇದುವರೆಗೆ ಅನುಶ್ರೀ ತಮ್ಮ ಮದುವೆ, ಪ್ರೇಮದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ನನಗೂ ಮದುವೆಯಾಗಬೇಕೆಂಬ ಆಸೆಯಿದೆ. ಮುಂದಿನ ವರ್ಷ ನೋಡೋಣ ಎಂದಿದ್ದರು.

ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ಕತೆ ಹೇಳಲು ಬರ್ತಿದ್ದೇನೆ ಎಂದಾಗ ಎಲ್ಲರೂ ಹುಬ್ಬೇರಿಸಿದ್ದಾರೆ. ಅಂತೂ ನಮ್ಮ ಅನುಶ್ರೀ ಮದುವೆಯಾಗ್ತಿದ್ದಾರಾ ಎಂದು ಕೆಲವರು ಕುತೂಹಲ ವ್ಯಕ್ತಪಡಿಸಿದ್ದರು. ಆದರೆ ಅನುಶ್ರೀ ತಮ್ಮ ಯೂ ಟ್ಯೂಬ್ ಚಾನೆಲ್ ನ ಹೊಸ ಸಂದರ್ಶನವೊಂದರ ಬಗ್ಗೆ ಈ ರೀತಿ ಪ್ರೋಮೋ ಬಿಟ್ಟಿದ್ದಾರೆ ಎನ್ನಲಾಗಿದೆ. ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಇತ್ತೀಚೆಗೆ ಹೊಸ ಸಂದರ್ಶನ ಮಾಡಿರಲಿಲ್ಲ. ಹೀಗಾಗಿ ಜನ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಈಗ ಜನರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇತ್ತೀಚೆಗಷ್ಟೇ ಮದುವೆಯಾಗಿರುವ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ಅವರ ಪ್ರೀತಿ ಕತೆಯನ್ನು ಅನುಶ್ರೀ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿಹೇಳಲಿದ್ದಾರೆ ಎನಿಸುತ್ತಿದೆ. ತರುಣ್ ಮತ್ತು ಸೋನಲ್ ರನ್ನು ಮದುವೆ ಬಳಿಕ ಇದೇ ಮೊದಲ ಬಾರಿಗೆ ಅನುಶ್ರೀ ಸಂದರ್ಶನ ನಡೆಸಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಇದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಣ್ಣ ಪ್ರಾಯದಲ್ಲೇ ಹೃದಯಾಘಾತಕ್ಕೆ ಬಲಿಯಾದ ಮಲಯಾಳಂನ ಖ್ಯಾತ ನಟ